ಕಾಪು, ಎ.19: ಕಾಪು ಭಾರತ್ ನಗರ ಬೂತ್ ಕಾಂಗ್ರೆಸ್ ಅಧ್ಯಕ್ಷ ಹುಸೈನಾರ್ ಕಾಪು (42) ಬುಧವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.
ಭಾರತ್ನಗರದಲ್ಲಿ ಕೋಳಿ ಅಂಗಡಿ ವ್ಯಾಪಾರ ನಡೆಸುತ್ತಿರುವ ಇವರು, ಮನೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆ ಉಸಿರೆಳೆದರು.
ಆಶ್ರಯದಾತ ರಿಕ್ಷಾ ಯೂನಿಯನ್ ಕಾಪು ತಾಲೂಕು ಅಧ್ಯಕ್ಷರಾಗಿರುವ ಇವರು, ಕಾಪು ಮಹಾಜನ ಮಿತ್ರ ಸಂಘ ಮಾಜಿ ಅಧ್ಯಕ್ಷರಾಗಿ, ಕಾಪು ನ್ಯೂ ಆಟೋ ರಿಕ್ಷಾ ಯೂನಿಯನ್ ಇದರ ಮಾಜಿ ಅಧ್ಯಕ್ಷ ಸೇವೆ ಸಲ್ಲಿಸಿದ್ದರು. ಇವರು ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿಯೇಶನ್ ಇದರ ಸಲಹೆಗಾರರಾಗಿ ಮತ್ತು ಸಕ್ರಿಯ ಕಾರ್ಯಕರ್ತರಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರ ಮನೆಗೆ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಪೊಲಿಪು ಜಾಮೀಯ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಸೂಪರ್ ಸ್ಟಾರ್, ಖುವ್ವತುಲ್ ಇಸ್ಲಾಂ ಯಂಗ್ಮೆನ್ಸ್ ಅಸೋಸಿ ಯೇಶನ್ ಅಧ್ಯಕ್ಷ ಆರೀಫ್ ಕಲ್ಯಾ ಭೇಟಿ ನೀಡಿ ಸಂತಾಪ ವ್ಯಕ್ತಪಡಿಸಿದ್ದಾರೆ.