ಹೂಡೆ: ಅಬುಲೈಸ್ ಇಸ್ಲಾಹಿ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್,ಹೂಡೆ ವತಿಯಿಂದ ಅಬುಲೈಸ್ ಇಸ್ಲಾಹಿ ಮಸೀದಿಯಲ್ಲಿ ಸರ್ವ ಧರ್ಮಿಯರಿಗೆ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಇದ್ರಿಸ್ ಹೂಡೆ, ರಂಝಾನ್ ತಿಂಗಳು‌ ಮುಸ್ಲಿಮರ ಪಾಲಿಗೆ ಅತ್ಯಂತ ಪವಿತ್ರ ತಿಂಗಳು. ಈ ತಿಂಗಳು ತರಬೇತಿಯ ತಿಂಗಳಾಗಿದೆ. ಪವಿತ್ರ ಕುರಾನ್ ಅವತೀರ್ಣವಾದ ತಿಂಗಳಾಗಿದೆ. ಮುಸ್ಲಿಮರು ಈ ತಿಂಗಳಿನಲ್ಲಿ ಉಪವಾಸ ಆಚರಣೆಯೊಂದಿಗೆ ಎಲ್ಲ ಕೆಡುಕಿನಿಂದ ದೂರ ಉಳಿಯುವುದು ಕಡ್ಡಾಯ. ಮುಂದಿನ ತಿಂಗಳುಗಳಲ್ಲಿ ಅದೇ ರೀತಿ ಬದುಕುವಂತಾಗಲು ಈ ತಿಂಗಳು ಮಾರ್ಗದರ್ಶಿ ಎಂದರು.

IMG 20230416 181423 Udupi, PRESS RELEASE / ORGANISATIONS

ಕುರಾನಿನಲ್ಲಿ ಸಮಸ್ತ ಮನುಷ್ಯರಿಗೆ ಮಾರ್ಗದರ್ಶನ ಮಾಡಲಾಗಿದೆ. ಆದಮರ ಮಕ್ಕಳಾದ ನಾವೆಲ್ಲರೂ ಸಮಾನರಾಗಿದ್ದು ಬಣ್ಣಗಳ ಆಧಾರದಲ್ಲಿ,ಜಾತಿ,ಪ್ರದೇಶದ ಆಧಾರದಲ್ಲಿ ಯಾವುದೇ ತಾರತಮ್ಯ ಇಲ್ಲ. ನಾವೆಲ್ಲರೂ ದೇವನ ದೃಷ್ಟಿಯಲ್ಲಿ ಸಮಾನರು ಎಂದು ಹೇಳಿದರು.

ರಂಝಾನ್ ತಿಂಗಳಿನಲ್ಲಿ ಮುಸ್ಲಿಮರು ಕೇವಲ ವಾಡಿಕೆಗೆ ಉಪವಾಸ ಆಚರಿಸಿ ಪ್ರಯೋಜನವಿಲ್ಲ. ಬದಲಾಗಿ ಎಲ್ಲ ಕೆಡುಕಿನಿಂದ ಮುಕ್ತರಾಗಬೇಕು.ಮುಖ್ಯವಾಗಿ ಮಾನವೀತ ಗುಣಗಳನ್ನು ಬೆಳೆಸಿಕೊಳ್ಳಬೇಕು. ತಮ್ಮ ಮಾತಿನಿಂದಾಗಲಿ,ನಡತೆಯಿಂದಾಗಲಿ ಯಾರನ್ನೂ ನೋಯಿಸಬಾರದು ಆಗ ಮಾತ್ರ ನಮ್ಮ ಉಪವಾಸ ಆಚರಣೆ ಯಶಸ್ವಿಯಾಗುತ್ತದೆ. ದೇವ ಭಯ ಮತ್ತು‌ ಸೃಷ್ಟಿಕರ್ತನ ಮೇಲೆ ಭರವಸೆ ಇಟ್ಟಾಗ ಇದು ಸಾಧ್ಯವಾಗುತ್ತದೆ ಎಂದು ಹೇಳಿದರು.

IMG 20230416 WA0068 Udupi, PRESS RELEASE / ORGANISATIONS

ನಿವೃತ್ತ ‌ಅಧ್ಯಾಪಕರಾದ ಸುಧಕಾರ್ ಶೆಟ್ಟಿಯವರು ಮಾತನಾಡಿ, ಇದೊಂದು ಸುಂದರ ಕಾರ್ಯಕ್ರಮ. ಇಂತಹ ಕಾರ್ಯಕ್ರಮದಿಂದ ಪರಸ್ಪರ ಪ್ರೀತಿ, ಸೌಹಾರ್ದತೆ ಹೆಚ್ಚಾಗುತ್ತದೆ. ಇವತ್ತಿನ ಕಾರ್ಯಕ್ರಮದಿಂದ ಮಸೀದಿ ನೋಡುವ ಸೌಭಾಗ್ಯ ದೊರೆಯಿತು. ಎಷ್ಟೊಂದು ಅಚ್ಚುಕಟ್ಟಾದ ಮಸೀದಿ ನೋಡಿದಾಗ ಖುಷಿಯಾಗುತ್ತದೆ. ನಾವೆಲ್ಲರೂ ಕೂಡ ಪರಸ್ಪರ ಕೂಡಿ ಬಾಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೂಡೆ ಬಿಲ್ಲವ ಸಂಘದ ಅಧ್ಯಕ್ಷರಾದ ಶಂಕರ್ ಅಂಚನ್, ಗ್ರಾ.ಪಂ ಸದಸ್ಯೆ ಯಶೋಧಾ,ನಿವೃತ್ತ ಬ್ಯಾಂಕ್ ಉದ್ಯೋಗಿ ಫೆಲಿಕ್ಸ್ ಪಿಂಟೊ, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಅಧ್ಯಕ್ಷರಾದ ಅಬ್ದುಲ್ ಕಾದೀರ್ ಮೊಯ್ದಿನ್ ಮಾತನಾಡಿದರು.

ಮೌಲನ ತಾರೀಕ್ ಅವರು ಕುರ್’ಆನ್ ಪಠಣ ನಡೆಸಿದರು.ಯಾಸೀನ್ ಕೋಡಿಬೆಂಗ್ರೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.

IMG 20230416 WA0071 Udupi, PRESS RELEASE / ORGANISATIONS

Latest Indian news

Popular Stories