ಹೆಬ್ರಿ, ಜ.11: ಮಣಿಪಾಲದಿಂದ ಹರಿಹರ ಕಡೆಗೆ ಬರುತ್ತಿದ್ದ ವ್ಯಾನ್ ಮಂಗಳವಾರ ಹೆಬ್ರಿಯ ಎಸ್‌ಆರ್ ಶಾಲೆಯ ಬಳಿಯ ಹಳ್ಳಕ್ಕೆ ಬಿದ್ದಿದೆ.
ರಸ್ತೆಗೆ ಬಂದ ಹಸುವನ್ನು ತಪ್ಪಿಸಲು ಯತ್ನಿಸಿದ ವ್ಯಾನ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.
ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ವ್ಯಾನ್‌ನಲ್ಲಿದ್ದವರು ಮಣಿಪಾಲದ ಆಸ್ಪತ್ರೆಗೆ ಭೇಟಿ ನೀಡಿ ಹರಿಹರಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ.