ಉಡುಪಿ | ಅಂಬಾಗಿಲು ಹೆದ್ದಾರಿಯಲ್ಲಿ ಅಪರಿಚಿತ ವ್ಯಕ್ತಿಗೆ ಡಿಕ್ಕಿ ಹೊಡೆದ ಸರಕಾರಿ ಬಸ್ಸು – ವ್ಯಕ್ತಿ ಮೃತ್ಯು | ಗುರುತು ಪತ್ತೆಗೆ ಆಪತ್ಭಾಂಧವ ಈಶ್ವರ್ ಮಲ್ಪೆ ಮತ್ತು ತಂಡದ ಮನವಿ

ಉಡುಪಿಯಿಂದ ಸಂತೆಕಟ್ಟೆಗೆ ಸಾಗುವ ಹೆದ್ದಾರಿಯ ಅಂಬಾಗಿಲು ಜಂಕ್ಷನ್ ನಿಂದ ತುಸು ದೂರದಲ್ಲಿರುವ ಬಿರಿಯಾನಿ ಸ್ಪಾಟ್ ಹೋಟೇಲ್ ಎದುರುಗಡೆ ರಸ್ತೆಯನ್ನು ದಾಟುತ್ತಿದ್ದ ಅಪರಿಚಿತ ವ್ಯಕ್ತಿಯೋರ್ವರಿಗೆ ಕುಂದಾಪುರ ಕ್ಕೆ ಹೋಗುತ್ತಿದ್ದ ಸರಕಾರಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರತರ ಗಾಯಗೊಂಡು ಮ್ರತಪಟ್ಟ ಘಟನೆ ನಡೆದಿದೆ.

ರಾತ್ರಿ 8:45 ಗಂಟೆಗೆ ಅಪಘಾತ ಸಂಭವಿಸಿದ್ದು , ಮಣಿಪಾಲ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ವ್ಯಕ್ತಿಯು ಮೃತಪಟ್ಟಿರುವುದಾಗಿ ಧ್ರಢೀಕರಿಸಿದ್ದಾರೆ.

ಈ ಬಗ್ಗೆ ಉಡುಪಿ ಸಂಚಾರಿ (Traffic) ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ವ್ಯಕ್ತಿಯ ಮ್ರತದೇಹವು ಕೆ ಎಂ ಸಿ ಮಣಿಪಾಲ ಆಸ್ಪತ್ರೆಯ ಶವಾಗಾರದಲ್ಲಿದೆ. ಈ ಮ್ರತ ವ್ಯಕ್ತಿಯ ಸಂಬಂಧಿಕರು ಅಥವಾ ಗುರುತು ಪರಿಚಯವಿರುವವರು ಈಶ್ವರ್ ಮಲ್ಪೆ 9663434415 ಅಥವಾ ಉಡುಪಿ ಸಂಚಾರಿ ಪೋಲಿಸ್ ಠಾಣೆ 0820 2521338 ಯನ್ನು ಸಂಪರ್ಕಿಸಬೇಕಾಗಿ ವಿನಂತಿಸಿದ್ದಾರೆ.

Latest Indian news

Popular Stories