ಆರೋಪಿ ಪ್ರವೀಣ್ ಚೌಗಲೆ ಮತ್ತೊಮ್ಮೆಜಾಮೀನಿಗೆ ಅರ್ಜಿ ಸಲ್ಲಿಕೆ | ಕಿಡ್ನಿ ಕಲ್ಲಿನ ಸಮಸ್ಯೆ, ಶಸ್ತ್ರ ಚಿಕಿತ್ಸೆಗೆ ಒಳಗಾದ ಆರೋಪಿ | ಮುಂದಿನ ವಿಚಾರಣೆ ಮಾರ್ಚ್ 27 ಕ್ಕೆ ಮುಂದೂಡಿಕೆ

ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯಾ ಪ್ರಕರಣದ ಆರೋಪಿ ಪ್ರವೀಣ್ ಚೌಗುಲೆ ಇಂದು
ಎರಡನೇ ಬಾರಿಗೆ ಜಾಮೀನು ಕೋರಿ ಉಡುಪಿಯ
ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ
ಅರ್ಜಿ ಸಲ್ಲಿಸಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ಆರೋಪಿ ಪರ ವಕೀಲ ರಾಜೇಶ್ ನ್ಯಾಯಾಲಯದಲ್ಲಿ
ಅರ್ಜಿ ಸಲ್ಲಿಸಿದ್ದಾರೆ. ಮಾ.27ರಂದು ಇದಕ್ಕೆ ಆಕ್ಷೇಪಣೆ
ಸಲ್ಲಿಸಲು ವಿಶೇಷ ಸರಕಾರಿ ಅಭಿಯೋಜಕರಿಗೆ
ಅವಕಾಶ ಕಲ್ಪಿಸಿ ನ್ಯಾಯಾಲಯ ಆದೇಶ ನೀಡಿದೆ.

ಈ ಹಿಂದೆ ಡಿ.14ರಂದು ಪ್ರವೀಣ್‌ ಚೌಗುಲೆ ಜಾಮೀನು
ಅರ್ಜಿಯನ್ನು ಇದೇ ಕೋರ್ಟ್‌ನಲ್ಲಿ ಸಲ್ಲಿಸಿದ್ದು, ವಿಚಾರಣೆನಡೆಸಿದ್ದ ನ್ಯಾಯಾಲಯ ಡಿ.30ರಂದು ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಆದೇಶ ನೀಡಿತ್ತು.

ಇಂದು ನ್ಯಾಯಾಲಯಕ್ಕೆ ಹಾಜರಾಗ ಬೇಕಾಗಿದ್ದ ಚೌಗಲೆ ಕಿಡ್ನಿ ಸ್ಟೋನ್‌ ಸಮಸ್ಯೆಗಾಗಿ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಲ್ಪೆ ಪೊಲೀಸರಿಗೆ ಜೈಲು ಅಧೀಕ್ಷಕರು ಆತ ಶಸ್ತ್ರಚಿಕಿತ್ಸೆಗೆ ಒಳಗಾದ ಕುರಿತು ದಾಖಲೆಗಳನ್ನು ನೀಡಿದರು. ಆರೋಪಿಯನ್ನು ಕೋರ್ಟ್‌ ಹಾಜರು ಪಡಿಸಲು ಸಾಧ್ಯವಾಗದ ದಾಖಲೆಗಳನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಸಲ್ಲಿಸಿದರು.

ಈ ಹಿನ್ನೆಲೆಯಲ್ಲಿ ಚಾರ್ಜ್ ಪ್ರಕ್ರಿಯೆಯನ್ನು ಮಾ.27ಕ್ಕೆ
ನಿಗದಿ ಪಡಿಸಿದ ನ್ಯಾಯಾಲಯವು ಆ
ಆರೋಪಿಯನ್ನು ಕೋರ್ಟ್‌ ಹಾಜರುಪಡಿಸುವಂತೆ ಮಲ್ಪೆ ಪೊಲೀಸರಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಪ್ರಕರಣದ ವಿಶೇಷ ಸರಕಾರಿ ಅಭಿಯೋಜಕ ಶಿವ ಪ್ರಸಾದ್ ಆಳ್ವ ಹಾಜರಿದ್ದರು.

Latest Indian news

Popular Stories