ಪ್ರೇಯಸಿಯೊಂದಿಗೆ ವಾಗ್ವಾದ: ಖಾಸಗಿ ಬಸ್ಸನ್ನು ಸಂತೆಕಟ್ಟೆಯಲ್ಲೇ ನಿಲ್ಲಿಸಿ ಹೋದ ಚಾಲಕ!

ಖಾಸಗಿ ಬಸ್ ಚಾಲಕನೊಬ್ಬ ತನ್ನ ಪ್ರೇಯಸಿಯೊಂದಿಗೆ ವಾಗ್ವಾದಕ್ಕಿಳಿದು ಬಸ್ಸನ್ನು ಅರ್ಧದಾರಿಯಲ್ಲಿ ನಿಲ್ಲಿಸಿ ಹೋದ ವಿಚಿತ್ರ ಘಟನೆ ಉಡುಪಿಯಲ್ಲಿ ನಡೆದಿದೆ.


ಉಡುಪಿ ನಗರದಿಂದ ಸಂತೆಕಟ್ಟೆಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಈ ಘಟನೆ ನಡೆದಿದೆ. ನಿಟ್ಟೂರಿನಲ್ಲಿ ಹತ್ತಿದ್ದ ಬಸ್ ಚಾಲಕನ ಪ್ರೇಯಸಿ ಹಾಗು ಚಾಲಕನ ಮಧ್ಯೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ಮಧ್ಯೆಯೂ ಚಾಲಕ ಬಸ್ಸನ್ನು ಚಲಾಯಿಸುತ್ತಲೇ ಇದ್ದ. ಕಂಡಕ್ಟರ್ ಇವರಿಬ್ಬರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಇವರಿಬ್ಬರ ವಾಗ್ವಾದದ ಮುಂದೆ ಅವರ ಪ್ರಯತ್ನ ವಿಫಲವಾಯಿತು.


ವಾಗ್ವಾದದಿಂದಾಗಿ ನಿರಾಶೆಗೊಂಡ ಚಾಲಕ ಬಸ್ಸನ್ನು ಅಂತಿಮವಾಗಿ ಸಂತೆಕಟ್ಟೆಯ ಆಶೀರ್ವಾದ್ ಥಿಯೇಟರ್ ಬಳಿ ನಿಲ್ಲಿಸಿ, ಬಸ್ಸಿನಿಂದ ಇಳಿದು ಹೊರಟುಹೋಗಿದ್ದಾನೆ. ಆತ ಬಸ್ ಇಳಿದುಹೋದ ಬೆನ್ನಲ್ಲೇ ಪೇಯಸಿಯೂ ಬಸ್ಸಿನಿಂದ ಇಳಿದು ಹೋಗಿದ್ದಾಳೆ.

ಚಾಲಕ ಹಾಗೂ ಆತನ ಪ್ರೇಯಸಿಯ ನಡುವಿನ ವಗ್ವಾದದಿಂದಾಗಿ ಬಸ್ ನಲ್ಲಿದ್ದ ಪ್ರಯಾಣಿಕರು ಪರದಾಡುವಂತಾಯಿತು. ಕೊನೆಗೆ ಕಂಡಕ್ಟರ್ ಬಸ್ ಓಡಿಸಿದ್ದಾರೆ ಎನ್ನಲಾಗಿದೆ.

Latest Indian news

Popular Stories