ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ; ಕೃತ್ಯ ಸಿಸಿ ಕೆಮರಾದಲ್ಲಿ ಸೆರೆ – ಪ್ರಕರಣ ದಾಖಲು

ಸಿದ್ದಾಪುರ: ಶಂಕರನಾರಾಯಣ ಪೊಲೀಸ್‌ ಠಾಣೆಯ ಅನತಿ ದೂರದ ಸರ್ಕಲ್‌ ಬಳಿ ಮಲಗಿದ್ದ ದನವನ್ನು ಕಳ್ಳರು ಸೋಮವಾರ ಬೆಳಗಿನ ಜಾವದಲ್ಲಿ ಐಶಾರಾಮಿ ಕಾರಿನಲ್ಲಿ ಬಂದು ಕಳವು ಮಾಡಿಕೊಂಡು ಹೋದ ಘಟನೆಯು ಸ್ಥಳೀಯ ಸಿಸಿ ಕೆಮರಾದಲ್ಲಿ ದಾಖಲಾಗಿದೆ.

ಮೂರ್‍ನಾಲ್ಕು ಮಂದಿ ಇದ್ದ ದನ ಕಳ್ಳರು ಐಶಾರಾಮಿ ಕಾರಿನಲ್ಲಿ ಬಂದು ಮಲಗಿದ್ದ ದನವನ್ನು ಕಾರಿನ ಹತ್ತಿರಕ್ಕೆ ಎಳೆದು ತಂದು ಎತ್ತಿ ಕಾರಿನೊಳಕ್ಕೆ ತಳ್ಳುತ್ತಾರೆ. ಪಕ್ಕದಲ್ಲಿ ಇರುವ ಉಳಿದ ದನಗಳು ಪ್ರತಿರೋಧ ವ್ಯಕ್ತಪಡಿಸಿದರೂ, ದುಷ್ಕರ್ಮಿಗಳು ಮತ್ತೂಂದು ದನವನ್ನು ಕಳವು ಮಾಡಲು ಯತ್ನಿಸಿದ್ದಾರೆ.

ಬಸ್‌ ನಿಲ್ದಾಣದ ಬಳಿ ಇದ್ದ ಬೀಟ್‌ ಪೊಲೀಸರು ಓಡಿ ಬಂದಾಗ ತಾವು ಬಂದ ಕಾರಿನಲ್ಲಿ ಆರೋಪಿಗಳು ದನ ಕೆಳಗೆ ಇಳಿಸಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2024 ಕಲಂ: 379, 511 ಜೊತೆಗೆ 34 ಐಪಿಸಿ. ಹಾಗೂ ಕಲಂ: 8,12 ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories