ಹಿರಿಯಡ್ಕ ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳಿಂದ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಯತ್ನ – ಪ್ರಕರಣ ದಾಖಲು

ಹಿರಿಯಡ್ಕ: ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಧೀನ ಕೈದಿಗಳು ಜೈಲು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.

ಜೈಲು ಅಧಿಕ್ಷರಾದ ಸಿದ್ದರಾಮ ಬಿ ಪಾಟೀಲ್‌ ಇವರು ಕೊಟ್ಟ ದೂರಿನ ಮೇರೆಗೆ ದೂರು ದಾಖಲಾಗಿದ್ದು ಜೂನ್ 24 ರಂದು ಕಾರಾಗೃಹದಲ್ಲಿರುವ ವಿಚಾರಣಾ ಖೈದಿ ಮಹಮ್ಮದ್‌ ಆಶೀಕ್‌ ಮತ್ತು ಮಹಮ್ಮದ್‌ ಸಕ್ಲೇನ್‌ ಇವರು ಕರ್ತವ್ಯದಲ್ಲಿದ್ದ ಜೈಲರ್‌ ಎಸ್‌ಎ ಶಿರೋಳರವರು ವಿಚಾರಣಾ ಬಂದಿಯವರನ್ನು ಚೇಂಬರಿಗೆ ಕರೆದುಕೊಂಡು ಬಂದು ಪಿಜನ್‌ ಕಾಲ್‌ ಸಿಸ್ಟಮ್‌ ಕರೆ ಮಾಡಲು ತಡವಾಯಿತೆಂದು ಹೇಳಿ ಜೈಲರ್‌ವರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿ ಜೋರಾಗಿ ಕೂಗಾಟ ಮಾಡಿ ಕಚೇರಿಯಿಂದ ಕರೆದುಕೊಂಡು ಹೋಗುವಾಗ ಸಿಬ್ಬಂದಿಗಳಲ್ಲಿ ಪುನಃ ಗಲಾಟೆ ಅರಂಭಿಸಿ ಸಿಬ್ಬಂದಿಯವರನ್ನು ತಳ್ಳಿ ಕೊಠಡಿಯಲ್ಲಿದ್ದ ಬೆಂಕಿ ನಂದಿಸುವ ಯಂತ್ರವನ್ನು ತೆಗೆಯಲು ಪ್ರಯತ್ನಿಸಿ ಬಳಿಕ ಅಡುಗೆ ಕೋಣೆಯಲ್ಲಿರುವ ದೊಡ್ಡ ಸೌಟನ್ನು ಮತ್ತು ಚಾ ಮಾಡುವ ಸೌಟನ್ನು ತಂದಿಲ್ಲದೆ, ಮಹಮ್ಮದ್‌ ಸಕ್ಲೇನ್‌ ತನ್ನ ಕೊಠಡಿಯ ಮರದ ಕುರ್ಚಿಯನ್ನು ತೆಗೆದುಕೊಂಡು ಹಲ್ಲೆ ಮಾಡಲು ಪ್ರಯತ್ನಿಸಿದ್ದು ಆಗ ಸಿಬ್ಬಂದಿಗಳು ಅವರನ್ನು ಹಿಡಿದಿರುತ್ತಾರೆ ಎಂದು ಆರೋಪಿಸಲಾಗಿದೆ.

ಸಿಬ್ಬಂದಿಗೆ ಹಲ್ಲೆ ಮಾಡಲು ಪ್ರಯತಿಸಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories