ಬಿಜೆಪಿಯಲ್ಲಿ ಚಮಚಾಗಿರಿಗೆ ಟಿಕೆಟ್‌ – ಸಂದರ್ಶನವೊಂದರಲ್ಲಿ ರಘುಪತಿ ಭಟ್ ಕಿಡಿ

ರಘುಪತಿ ಭಟ್ ಬಂದ ಜೆಪಿಯ ವಿರುದ್ಧ ಸಿಡಿದೆದ್ದು ಇದೀಗ ವಿಧಾನ ಪರಿಷತ್ ನ ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

ಸ್ಥಳೀಯ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ” ರಾಜಕೀಯವಾಗಿ ಸಕ್ರಿಯವಾಗಿದ್ದ ನನಗೆ ಖಾಲಿಯಾಗಿ ಕುಳಿತುಕೊಳ್ಳ ಲಾಗದು. ಕೆಲಸ ಮಾಡುವ ಹುಮ್ಮಸ್ಸಿತ್ತು. ರಾಜ್ಯ ನಾಯಕರ ಭರವಸೆ ಆಧರಿಸಿ ಕಾರ್ಯಾರಂಭ ಮಾಡಿದೆ. ನೋಡಿ, ನಾಯಕರ, ಹೈಕಮಾಂಡ್‌ ಆಧಾರಿತ ರಾಜಕಾರಣ ಒಳ್ಳೆಯದಲ್ಲ. ಗಾಡ್‌ಫಾದರ್‌ ಇರುವ ವರಿಗೆ, ಚಮಚಾಗಿರಿ ಮಾಡುವವರಿಗೆ ಟಿಕೆಟ್‌ ಸಿಗುವಂತಾಗಿದೆ. ಇದರ ಬದಲು ಕಾರ್ಯಕರ್ತರಿಗೆ ಅವಕಾಶ ಸಿಗಬೇಕು, ಅವರ ಆಧಾರಿತ ರಾಜಕಾರಣ ಬರಲೆಂದೇ ಈ ಬಂಡಾಯ. ಇನ್ನು ಸುನಿಲ್‌ ಕುಮಾರ್‌ ಮತ್ತಿತರರು ಮನವೊಲಿಸಲು ಬಂದಿದ್ದರು. ಶಕ್ತಿ ಬಳಸಿ ಟಿಕೆಟ್‌ ಕೊಡುವಂತೆ ಕೇಳಿರುವೆ. ಪಕ್ಷದ ಕೆಲವು ಆಂತರಿಕ ವಿಷಯದ ಬಗ್ಗೆಯೂ ತಿಳಿಸಿರುವೆ” ಎಂದು ಹೇಳಿದ್ದಾರೆ.

ಪಕ್ಷದ ನಿರಂತರ ತಪ್ಪುಗಳನ್ನು ಎಚ್ಚರಿಸಬೇಕು. ಯಾರೋ ಒಂದು ಪಟ್ಟಿ ಕೊಟ್ಟ ತತ್‌ಕ್ಷಣ ಗೆಲ್ಲಿಸುತ್ತಾರೆ ಎಂಬುದು ಸರಿಯಲ್ಲ. ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ ನನಗೆ ಇಂದು ರಾಷ್ಟ್ರೀಯ ಅಧ್ಯಕ್ಷರನ್ನು ಹೇಗೆ ಭೇಟಿಯಾಗಬೇಕು ಎಂಬುದೇ ತಿಳಿಯುತ್ತಿಲ್ಲ. ಪುತ್ತೂರಿನಲ್ಲಿ ಅರುಣ್‌ಕುಮಾರ್‌ ಪುತ್ತಿಲರಿಂದ ಸ್ಪಲ್ಪ ಮಟ್ಟಿನ ಅರಿವಾಗಿದೆ. ಗೆದ್ದ ಮೇಲೆ ಪಕ್ಷವು ನನ್ನನ್ನೂ ಗೌರವದಿಂದಲೇ ಸ್ವೀಕರಿಸಲಿದೆ. ಪಕ್ಷದ ವಿರುದ್ಧವೂ ಹೋಗುವುದಿಲ್ಲ. ಪಕ್ಷದೊಳಗಿನ ಆಂತರಿಕ ಲೋಪ ಸರಿಯಾಗಬೇಕಷ್ಟೇ.

ಪಕ್ಷದ ವಿರುದ್ಧವಲ್ಲ.. ಪಕ್ಷದ ತಪ್ಪು ನಿರ್ಧಾರದಿಂದ ಕರಾವಳಿ, ಶಿವಮೊಗ್ಗ, ಚಿಕ್ಕಮಗಳೂರು ಸಹಿತ ಎಲ್ಲ ಭಾಗದಲ್ಲೂ ಕಾರ್ಯಕರ್ತರು ಆಕ್ರೋಶಿತರಾಗಿದ್ದಾರೆ. ಇದನ್ನು ಸಂಘರ್ಷದ ಚುನಾವಣೆಯಾಗಿ ಮಾಡಲಾರೆ. ಮತದಾರರಿಗೆ ಒಂದು ಪತ್ರ ಬರೆದು, ಕಾರ್ಯಕರ್ತರು, ಮತದಾರರನ್ನು ಕೇಂದ್ರವಾಗಿಸಿ ಬೂತ್‌ವಾರು ಸಂಪರ್ಕಿಸುವೆ.

ಕೆಲಸ ಮಾಡುವಾಗ ನಿರೀಕ್ಷೆ ಇರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ತಪ್ಪಿದಾಗ ಬೇಸರವಾಗಿತ್ತು. ಕಾರಣ ಪಕ್ಷದ ನಾಯಕರ ವರ್ತನೆ ಸರಿ ಇರಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ  ಸಾಮಾಜಿಕ ನ್ಯಾಯದ ಕಾರಣದಿಂದ ನನಗೆ ನನಗೂ ಅನ್ಯಾಯವಾಗಿತ್ತು ಎಂದುಕೊಂಡೆ. ಆಗ ಪಕ್ಷದ ಕಾರ್ಯಕರ್ತರೊಬ್ಬರಿಗೆ ಟಿಕೆಟ್‌ ಕೊಟ್ಟಿದ್ದರಿಂದ ಕೆಲಸ ಮಾಡಿದೆ. ಆದರೆ  ಈಗ ಹಾಗಲ್ಲ. ಕಾರ್ಯಕರ್ತರನ್ನು ಪರಿಗಣಿಸಿಲ್ಲ. ಹಿರಿತನವನ್ನು ಗೌರವಿಸಿಲ್ಲ. ಇತ್ತೀಚೆಗೆ ಪಕ್ಷ ಸೇರಿದವರಿಗೆ ಜಾತಿ ಆಧಾರದಲ್ಲಿ ಟಿಕೆಟ್‌ ನೀಡಿದ್ದು ಮನಸ್ಸಿಗೆ ನೋವಾಗಿದೆ. ಆದ್ದರಿಂದಲೇ ಬಂಡಾಯ ಸಾರಿದ್ದೇನೆ ಎಂದರು.

Latest Indian news

Popular Stories