ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕುದುರೆಗಳ ಓಡಾಟ – ವೀಡಿಯೋ ವೈರಲ್

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿಯಲ್ಲೊ ಮೂರು ಕುದುರೆಗಳು ಓಡಾಟದ ವೀಡಿಯೋ ವೈರಲಾಗಿದೆ. ಕುದುರೆ ಓಡಾಟದಿಂದಾಗಿ ಸ್ವಲ್ಪ ಸಮಯ ವಾಹನ ಸಂಚಾರಕ್ಕೂ ಆಡಚಣೆ ಉಂಟಾಗಿದೆ.

ಹೆದ್ದಾರಿಯಲ್ಲಿ ಕುದುರೆ ಓಡಾಡುವುದನ್ನು ನೋಡಿದ ಪ್ರಯಾಣಿಕರು ಬೆಚ್ಚಿಬಿದ್ದಿದ್ದಾರೆ. ಇದರ ಜೊತೆಗೆ ವಾಹನ ಸವಾರರು ಪ್ರಾಣಿಗಳ ಸುತ್ತ ಸುರಕ್ಷಿತವಾಗಿ ಸಂಚರಿಸಲು ಹರಸಾಹಸ ಪಡುತ್ತಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ಈ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದಂತೆ ತಕ್ಷಣ ಕುದುರೆ ಮಾಲೀಕರು ಸ್ಥಳಕ್ಕೆ ಧಾವಿಸಿ ಕುದುರೆಗಳನ್ನು ಲಾಯಕ್ಕೆ ಕೊಂಡೊಯ್ದಿದ್ದಾರೆ. ಇನ್ನೂ ಎರಡು ಕುದುರೆಗಳು ನಾಪತ್ತೆಯಾಗಿದ್ದು, ಈ ಕುದುರೆಗಳು ಎಲ್ಲಾದರೂ ಕಂಡು ಬಂದಲ್ಲಿ ಮಾಹಿತಿ ನೀಡುವಂತೆ ಮಾಲೀಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Latest Indian news

Popular Stories