ಬ್ರಹ್ಮಾವರ: ತುಕ್ಕು ಹಿಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ – ಅಪಾಯಕ್ಕೆ ಆಹ್ವಾನ

ತುಕ್ಕು ಹಿಡಿದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬ, ಯಾವುದೇ ಸೂಕ್ತ ಭದ್ರತೆ ಇಲ್ಲದೆ ಟ್ರಾನ್ಸ್ ಫಾರ್ಮರ್ ಒಂದು ಸಾರ್ವಜನಿಕರಿಗೆ ಅಪಾಯವನ್ನು ಆಹ್ವಾನಿಸುತ್ತಿದೆ. ಅಂದ ಹಾಗೆ ಈ ದ್ರಶ್ಯ ಕಂಡುಬರುತ್ತಿರುವುದು ಬ್ರಹ್ಮಾವರ ಸಮೀಪದ ಮಟಪಾಡಿ ಬಳಿ.


ಸುಮಾರು 50ಕ್ಕೂ ಮನೆಗಳಿಗೆ ಸಂಪರ್ಕ ಕಲ್ಪಿಸುವ ಈ ಟ್ರಾನ್ಸ್ ಫಾರ್ಮರ್ ಕಳೆದ ಕೆಲವು ಸಮಯದಿಂದ ಅಪಾಯವನ್ನು ಆಹ್ವಾನಿಸುತ್ತಿದೆ. ಸುಮಾರು 30 ವರ್ಷಗಳಿಂದಲೂ ಹಿಂದಿನಿಂದಲೂ ಮಟಪಾಡಿ ಶ್ರೀ ನಿಕೇತನ ಶಾಲೆಯ ಬಳಿ ಇರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಅಳವಡಿಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಬೀಳುವ ಹಂತದಲ್ಲಿವೆ.


ಈ ಭಾಗದಲ್ಲಿ ಅಂಗನವಾಡಿ ಕೇಂದ್ರ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಮತ್ತು ಅಂಚೆ ಕಚೇರಿ ಹಾಗೂ ಯಕ್ಷಗಾನ ಸಂಘದ ಕಚೇರಿ ಇದೆ ಅಲ್ಲದೆ ಜನವಸತಿ ಪ್ರದೇಶ ಇದಾಗಿದ್ದು, ಪ್ರತಿನಿತ್ಯ ನೂರಾರು ಮಂದಿ ಸಾರ್ವಜನಿಕರು ಈ ಪ್ರದೇಶದಲ್ಲಿ ತಿರುಗಾಡುತ್ತಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಅಳವಡಿಸಲಾದ ಕಬ್ಬಿಣದ ಕಂಬಗಳು ತುಕ್ಕು ಹಿಡಿದು ಬೀಳುವ ಪರಿಸ್ಥಿತಿಯಲ್ಲಿರುವುದರಿಂದ ಸಾರ್ವಜನಿಕರಿಗೆ ಅಪಾಯವನ್ನು ಕಟ್ಟಿಟ್ಟ ಬುತ್ತಿ ಆಗಿ ಪರಿಣಮಿಸಿದೆ.


ಈ ಪರಿಸರದಲ್ಲಿ ನೂರಾರು ಮಂದಿ ಶಾಲಾ ವಿದ್ಯಾರ್ಥಿಗಳು , ಮಕ್ಕಳು ತಿರುಗಾಡುತ್ತಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಯಾವುದೇ ರೀತಿಯ ತಡೆ ಬೇಲಿ ಇಲ್ಲದೆ ಅವಘಡಕ್ಕೆ ಆಹ್ವಾನ ನೀಡುತ್ತಿದೆ. ಅಷ್ಟೇ ಅಲ್ಲದೆ ಪವರ್ ಮ್ಯಾನ್ ಗಳ ಜೀವಕ್ಕೂ ಅಪಾಯವಿದೆ.


ಅಪಾಯದಲ್ಲಿರುವ ಈ ಟ್ರಾನ್ಸ್ ಫಾರ್ಮರ್ ನಿಂದ ಯಾವುದೇ ಕ್ಷಣದಲ್ಲೂ ಅಪಾಯ ಸಂಭವಿಸುವ ಸಾಧ್ಯತೆ ಇದ್ದು ತುಕ್ಕು ಹಿಡಿದಿರುವ ಕಂಬಗಳನ್ನು ಕೂಡಲೇ ಬದಲಿಸುವ ಅವಶ್ಯಕತೆ ಇದ್ದು, ಇಲ್ಲವಾದಲ್ಲಿ ಈ ಮಳೆಗಾಲದಲ್ಲಿ ತುಂಡಾಗಿ ಬಿದ್ದು ಜೀವಹಾನಿ ಸಂಭವಿಸುವ ಮೊದಲು ಅದನ್ನು ಬದಲಿಸುವಂತೆ ಸಾರ್ವಜನಿಕರು ಮೆಸ್ಕಾಂ ಇಲಾಖೆಗೆ ಮನವಿ ಮಾಡಿದ್ದು ಸೂಕ್ತ ಕ್ರಮ ಕೈಗೊಂಡು ಮುಂಬರುವ ಅಪಾಯ ತಪ್ಪಿಸಬೇಕಾಗಿದೆ.

Latest Indian news

Popular Stories