ಬ್ರಹ್ಮಾವರ: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ತಡರಾತ್ರಿ ಲೌಡ್ ಸ್ಪೀಕರ್ ಬಳಕೆ – ಎಫ್.ಐ.ಆರ್

ಸಾಂದರ್ಭಿಕ ಚಿತ್ರ

ಬ್ರಹ್ಮಾವರ: ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ತಡರಾತ್ರಿ ಅನಧಿಕೃತವಾಗಿ ಲೌಡ್ ಸ್ಪೀಕರ್ ಬಳಸಿದ ಕಾರಣ ಪ್ರಕರಣ ದಾಖಲಾಗಿದೆ.

ಕೆಳಕರ್ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟದಲ್ಲಿ ಲೌಡ್‌ ಸ್ಪೀಕರ್‌ ಹಾಕಿ ವೀಕ್ಷಕ ವಿವರಣೆ ಮಾಡಿ ಸಾರ್ವಜನಿಕರಿಗೆ ಉಪದ್ರವಾಗುತ್ತಿರುವುದಾಗಿ ಸಾರ್ವಜನಿಕರು ಠಾಣೆಗೆ ದೂರವಾಣೆ ಕರೆ ಮಾಡಿ ತಿಳಿಸಿದ್ದಾರೆ.

ಸ್ಥಳಕ್ಕೆ ಹೋಗಿ ಪೊಲೀಸರು ನೋಡಿದಾಗ ಹೊಸೂರು ಗ್ರಾಮದ ಕೆಳಕರ್ಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಹೊನಲು ಬೆಳಕಿನ ವಾಲಿಬಾಲ್‌ ಪಂದ್ಯಾಟದಲ್ಲಿ ಲೌಡ್‌ ಸ್ಪೀಕರ್‌ ಹಾಕಿ ವೀಕ್ಷಕ ವಿವರಣೆಯನ್ನು ತಡ ರಾತ್ರಿವರೆಗೂ ನಡೆಸುತ್ತಿದ್ದು, ಈ ಪಂದ್ಯಾಟದ ಆಯೋಜಕರಲ್ಲಿ ವಿಚಾರಿಸಿದಲ್ಲಿ ಸಕ್ಷಮ ಪ್ರಾಧಿಕಾರ ದಿಂದ ಪರವಾನಿಗೆ ಯಾ ಪೂರ್ವಾನುಮತಿ ಪಡೆದುಕೊಂಡಿರುವುದಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಪರವಾನಿಗೆ ಇಲ್ಲದೇ ತಡ ರಾತ್ರಿವರೆಗೆ ದ್ವನಿವರ್ದಕವನ್ನು ಅತೀ ಕರ್ಕಶವಾಗಿ ಸಾರ್ವಜನಿಕರಿಗೆ ಉಪದ್ರವಾಗುವ ರೀತಿಯಲ್ಲಿ ಬಳಸಿ ಸಾರ್ವಜನಿಕರಿಗೆ ತೊಂದರೆವುಂಟು ಮಾಡಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 42/2024 ಕಲಂ: 109 K P Act ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories