ನಿಗದಿತ ರೂಟ್ ಪರ್ಮಿಟ್ ಹೊಂದಿರುವ ಬಸ್ ಗಳು ನಿಯಮಬಾಹಿರವಾಗಿ ನಿಗದಿತ ರೂಟ್ ನಲ್ಲಿ ಸಂಚರಿಸದೆ ಸಾರ್ವಜನಿಕರಿಗೆ ತೊಂದರೆ – ಯಶ್ಫಾಲ್ ಸುವರ್ಣ

ಉಡುಪಿ ಆರ್ ಟಿ ಒ ಕಚೇರಿಗೆ ಶಾಸಕ ಯಶ್ ಪಾಲ್ ಸುವರ್ಣ ಭೇಟಿ

ಆರ್ ಟಿ ಒ. ಕಚೇರಿಗೆ ಸಂಬಂಧಿಸಿದಂತೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳು ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆದರು.

ಆರ್ ಟಿ ಒ ಕಚೇರಿಯಲ್ಲಿ ಡ್ರೈವಿಂಗ್ ಲೈಸೆನ್ಸ್ ಹಾಗೂ ಆರ್ ಸಿ ಸ್ಮಾರ್ಟ್ ಕಾರ್ಡ್ ವಿತರಣೆಯಲ್ಲಿ ವಿಳಂಬ, ಹಿಂದಿನ ಪುಸ್ತಕ ಆರ್ ಸಿ ಹಾಗೂ ಡ್ರೈವಿಂಗ್ ಲೈಸನ್ಸ್ ನವೀಕರಣಕ್ಕಾಗಿ ಬೆಂಗಳೂರು ಕಚೇರಿಯಲ್ಲಿ ಕಳುಹಿಸುತ್ತಿದ್ದು ಕಳೆದ 8 ತಿಂಗಳಿಂದ ಈ ಪ್ರಕ್ರಿಯೆ ನಡೆಯದೇ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿರುವ ಬಗ್ಗೆ ಅಧಿಕಾರಿಗಳಲ್ಲಿ ಮಾಹಿತಿ ಪಡೆದು ಈ ಬಗ್ಗೆ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಿಗದಿತ ರೂಟ್ ಪರ್ಮಿಟ್ ಹೊಂದಿರುವ ಬಸ್ ಗಳು ನಿಯಮಬಾಹಿರವಾಗಿ ನಿಗದಿತ ರೂಟ್ ನಲ್ಲಿ ಸಂಚರಿಸದೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಅಂಬಾಗಿಲು ಗುಂಡಿಬೈಲ್ ಕಲ್ಸಂಕ ಮಾರ್ಗದ ಪರ್ಮಿಟ್ ಹೊಂದಿರುವ ಬಸ್ಸುಗಳು ಸಂಚರಿಸುತ್ತಿಲ್ಲ ಇಂತಹ ಬಸ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆರ್ ಟಿ ಒ ಕಚೇರಿಯಲ್ಲಿ 36 ಮಂಜೂರು ಹುದ್ದೆಗಳ ಪೈಕಿ ಕೇವಲ 15 ಹುದ್ದೆಗಳು ಭರ್ತಿಯಾದ ಬಗ್ಗೆ ಮಾಹಿತಿ ಪಡೆದ ಶಾಸಕರು, ತಕ್ಷಣ ಖಾಲಿ ಹುದ್ದೆ ಭರ್ತಿಗೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಶೇಖರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest Indian news

Popular Stories