“ನನ್ನ ಸ್ಪರ್ಧೆಯಿಂದ ಸಿಟಿ ರವಿಗೆ ನ್ಯಾಯ ಸಿಕ್ಕಿದೆ” – ರಘುಪತಿ ಭಟ್

ಉಡುಪಿ:ನೈರುತ್ಯ ಪದವೀಧರ ಕ್ಷೇತ್ರ ಸೋಲಿನ ಬಳಿಕ ರಘುಪತಿ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ” ನನ್ನ ಸ್ಪರ್ಧೆಯಿಂದ ಸಿಟಿ ರವಿಗೆ ನ್ಯಾಯ ಸಿಕ್ಕಿದೆ. ಹಿಂದುತ್ವ ,ರಾಷ್ಟ್ರೀಯತೆ ಗೆ ಈ ಮೂಲಕ ವಿಧಾನ ಪರಿಷತ್ತಿನಲ್ಲಿ ಅವಕಾಶ ಸಿಕ್ಕಿದೆ” ಎಂದು‌ ಹೇಳಿದರು.

ತಪ್ಪು ನಿರ್ಧಾರಗಳ ಬಗ್ಗೆ ಪಕ್ಷ ಎಚ್ಚೆತ್ತುಕೊಳ್ಳಬೇಕು ಎಂದು ನನ್ನ ಅಭಿಲಾಷೆ ಇತ್ತು. ಸಾಮಾನ್ಯ ಕಾರ್ಯಕರ್ತರು ಪದವೀಧರ ಕ್ಷೇತ್ರ ದಲ್ಲಿ
ಸ್ಪರ್ಧಿಸುವುದು ಇನ್ನು ಕನಸು. ಅವಕಾಶ ವಂಚಿತರಿಗೆ ಈ ಹಿಂದೆ ಪದವಿಧರ ಕ್ಷೇತ್ರ ಮತ್ತು ಶಿಕ್ಷಕರ ಕ್ಷೇತ್ರ ದಲ್ಲಿ ಅವಕಾಶ ಸಿಗುತ್ತಿತ್ತು. ಇದು ರಾಜಕೀಯ ಕ್ಷೇತ್ರದಲ್ಲಿ ಅತ್ಯಂತ ಬೇಸರದ ವಿಷಯ. ಈ ಚುನಾವಣೆಯಲ್ಲಿ ನನಗೆ ಸಮಯದ ಕೊರತೆ ಆಯ್ತು ಎಂದರು.

ನೋಂದಣಿ ದೊಡ್ಡ ಸಮಸ್ಯೆ ಇದರಿಂದ ಕೊರತೆ ಆಯ್ತು. ಗೆಲ್ಲುವ ವಿಶ್ವಾಸದಲ್ಲೇ ನಾನು ಸ್ಪರ್ಧಿಸಿದ್ದು. ಅನೇಕ ನಾಯಕರು ನನ್ನ ಸಾತ್ವಿಕ ಹೋರಾಟವನ್ನು ಬೆಂಬಲಿಸಿದರು. ಈ ಮಟ್ಟದ ಸೋಲು ನನಗೆ ಅನಿರೀಕ್ಷಿತವಾಗಿದೆ. ಇದು ಮತದಾರರ ನಿರ್ಣಯ ಸ್ವೀಕರಿಸಬೇಕು. ಐದು ಜಿಲ್ಲೆಗೂ ಪ್ರವಾಸ ಮಾಡಿ ಅಭಿನಂದಿಸುವೆ ಎಂದರು.

ಸೋಲಿನಿಂದ ನಾನು ಓಡಿ ಹೋಗುವುದಿಲ್ಲ. ರಾಜಕೀಯ, ಸಾಮಾಜಿಕ ಕಾರ್ಯಕರ್ತ ನಾಗಿ ಇರ್ತೇನೆ. ಕಾರ್ಯಕರ್ತರ ಧ್ವನಿಯಾಗಿ ಇರ್ತೇನೆ. ಪಕ್ಷವನ್ನು ಎದುರು ಹಾಕಿಕೊಂಡು ನಿಂತಿದ್ದೇನೆ. ನನ್ನ ಜೊತೆ ಬಂದವರ ಪರ ಇರೋದು ನನ್ನ ಜವಾಬ್ದಾರಿಯಾಗಿದೆ ಎಂದರು.

ಪಕ್ಷದ ತಪ್ಪು ನಿರ್ಧಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸುವುದು ಉದ್ದೇಶವಾಗಿತ್ತು. ಅದರಲ್ಲಿ ಯಶಸ್ವಿಯಾಗಿದ್ದೇವೆ. ಆರ್ ಎಸ್ ಎಸ್ ನೇರವಾಗಿ ಫೀಲ್ಡ್ ಗೆ ಇಳಿದು ಕೆಲಸ ಮಾಡುವಂತಾಯ್ತು. ಬಿಜೆಪಿ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಬರುವಂತಾಯಿತು. ಎಚ್ಚರಿಸುವ ಕೆಲಸ ಆಗಬೇಕಿತ್ತು ಅದನ್ನು ಮಾಡಿದ್ದೇನೆ ಎಂದರು.

ಸಾಮಾಜಿಕ ರಾಜಕೀಯ ಜೀವನದಿಂದ ಹಿಂದೆ ಸರಿಯುವುದಿಲ್ಲ. ನನ್ನ ಮನೆ ಸದಾ ನೊಂದವರಿಗೆ, ಸಮಸ್ಯೆ ಇರುವವರಿಗೆ ತೆರೆದಿರುತ್ತದೆ. ನಾನು ಬಿಜೆಪಿಯ ಕಾರ್ಯಕರ್ತರನ್ನಾಗಿ ಮುಂದುವರಿಯುತ್ತೇನೆ. ರಾಷ್ಟ್ರೀಯತೆ ವಿಚಾರದಲ್ಲಿ ಗಟ್ಟಿಯಾಗಿ ನಿಲ್ಲುತ್ತೇನೆ. ಬಿಜೆಪಿ ಲೋಕಸಭೆಗಿಂತಲೂ ಗಂಭೀರವಾಗಿ ಸವಾಲಾಗಿ ಚುನಾವಣೆ ನಡೆಸಿತು ಎಂದು‌ ಹೇಳಿದರು.

ಇದೇ ಮೊದಲ ಬಾರಿಗೆ ಕ್ಷೇತ್ರಾದ್ಯಂತ ಹಣ ಹಂಚುವ ಕೆಲಸವಾಗಿದೆ. ಚುನಾವಣೆ ಮುಗಿದ ನಂತರ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.

Latest Indian news

Popular Stories