ಉಡುಪಿ: ರಾಜ್ಯ ಸಭಾ ಸದಸ್ಯ ನಾಸೀರ್ ಖಾನ್ ಗೆಲುವಿನ ಹಿನ್ನಲೆಯಲ್ಲಿ ವಿಧಾನ ಸೌಧದ ಬಳಿ ಅವರ ಬೆಂಬಲಿಗರು ಪಾಕಿಸ್ತಾನ ಪರ ಘೋಷಣೆ ಕೂಗಿರುವ ಕುರಿತು ಆರೋಪ ಮಾಡಲಾಗಿತ್ತು. ಆದರೆ ಇವರೆಗೆ ವೀಡಿಯೋದಲ್ಲಿ ಇದು ಸಾಬೀತಾಗಿಲ್ಲ. ಈ ಆರೋಪದ ಹಿನ್ನಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಈತನ್ಮಧ್ಯೆ ಬಿಜೆಪಿ ಈ ಆಧಾರ ರಹಿತ ಆರೋಪವನ್ನು ರಾಜಕೀಯಕ್ಕೆ ಬಳಸಲು ಸರ್ವ ಸಿದ್ಧತೆ ಮಾಡಿಕೊಂಡಿದ್ದು ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ನಡೆಸುವ ಸಾಧ್ಯತೆ ಇದ್ದು ಇದಕ್ಕೆ ಹತಾಶೆಯ ಸುಳ್ಳಾರೋಪ ಎಂದು ಕಾಂಗ್ರೆಸ್ ಕಾರ್ಯಕರ್ತರೂ ಕಚೇರಿ ಬಳಿ ಜಮಾಯಿಸಿದ್ದಾರೆ.
ಇದೀಗ ಕಾಂಗ್ರೆಸ್ ಕಚೇರಿ ಬಳಿ ಪೊಲೀಸರು ಬಿಗಿ ಬಂದೋಬಸ್ತು ಏರ್ಪಡಿಸಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಭವನದತ್ತ ಹೋಗುವ ದಾರಿಯನ್ನು ಬ್ಯಾರಿಕೇಡ್ ಮೂಲಕ ಮುಚ್ಚಿದ್ದಾರೆ.