ವಿಧಾನ ಪರಿಷತ್ ಚುನಾವಣಾ ಪ್ರಚಾರ ಪತ್ರದಲ್ಲಿ ಕಾಂಗ್ರೆಸ್ ಎಡವಟ್ಟು:ಮುನಿಯಾಲು ಬದಲು ಬಿಜೆಪಿಯ ಉದಯ ಕುಮಾರ್ ಶೆಟ್ಟಿ ಫೋಟೋ ಮುದ್ರಣ

ಉಡುಪಿ: ವಿಧಾನ ಪರಿಷತ್ ನೈರುತ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಪ್ರಚಾರ ಪತ್ರದಲ್ಲಿ ಬಹಳ ದೊಡ್ಡ ಎಡವಟ್ಟು ಕಂಡು ಬಂದಿದೆ. ಇದರಲ್ಲಿ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ ಕುಮಾರ್ ಶೆಟ್ಟಿ ಬದಲು ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ ಅವರ ಭಾವಚಿತ್ರವನ್ನು ಮುದ್ರಿಸಿದೆ.

ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾಕ್ಟರ್ ಕೆಕೆ ಮಂಜುನಾಥ್ ಕುಮಾರ್ ಅವರ ಚುನಾವಣಾ ಪ್ರಚಾರ ಪತ್ರದಲ್ಲಿ ಈ ಎಡವಟ್ಟು ಕಂಡು ಬಂದಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ ಆರು ಪುಟಗಳ ಪ್ರಚಾರ ಪತ್ರದ ಐದನೇ ಪುಟದಲ್ಲಿ ಎಲ್ಲಾ ನಾಯಕರ ಫೋಟೋಗಳ ಮಧ್ಯೆ ಬಿಜೆಪಿ ಉದಯಕುಮಾರ್ ಶೆಟ್ಟಿ ಅವರ ಫೋಟೋ ಕೂಡ ರಾರಾಜಿಸುತ್ತಿದೆ.

ಇದು ಗೂಗಲ್ ನಲ್ಲಿ ಸರ್ಚ್ ಮಾಡಿದ ಪರಿಣಾಮ ಆಗಿರುವ ದೋಷ ಎಂದು ತಿಳಿದು ಬಂದಿದೆ. ಈಗಾಗಲೇ ಸಾವಿರಾರು ಪ್ರಚಾರ ಪತ್ರಗಳನ್ನು ಮುದ್ರಿಸಿ ಹಂಚಲಾಗಿದೆ.

IMG 20240529 WA0015 Udupi

1001141664 Udupi

Latest Indian news

Popular Stories