ಉಡುಪಿಯಲ್ಲಿ ನಿರಂತರ ಭಾರೀ ಮಳೆ; ನದಿ ತೀರ ಪ್ರದೇಶ, ತಗ್ಗು ಪ್ರದೇಶಗಳಲ್ಲಿ ನೆರೆ ಭೀತಿ

ಉಡುಪಿ: ಉಡುಪಿಯಲ್ಲಿ ವಿಪರೀತ ಮಳೆಯಾಗುತ್ತಿದ್ದು ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಇನ್ನು ನದಿ ತೀರಾ ಪ್ರದೇಶಗಳು ನೆರೆ ಭೀತಿ ಎದುರಿಸುತ್ತಿದೆ.

ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.

ಕಳೆದ 36 ಗಂಟೆಗಳಿಂದ ಉಡುಪಿ ಜಿಲ್ಲೆಯಾದ್ಯಂತ ಗಾಳಿ-ಗುಡುಗು-ಮಿಂಚುಗಳಿಲ್ಲದೇ ನಿರಂತರ ಮಳೆ ಸುರಿಯುತಿದ್ದು, ತಗ್ಗು ಪ್ರದೇಶಗಳೆಲ್ಲಾ ನೀರಿನಿಂದ ಆವೃತ್ತವಾಗಿವೆ. ಜಿಲ್ಲೆಯ ಅನೇಕ ಕಡೆಗಳಲ್ಲಿ ಕೃತಕ ನೆರೆ ಕಂಡು ಬಂದಿದ್ದು, ಜನರು ಪರದಾಡುವಂತಾಗಿದೆ.

ಹಿಂದಿನ 24 ಗಂಟೆಗಳಲ್ಲಿ ಬ್ರಹ್ಮಾವರ ತಾಲೂಕಿನಲ್ಲಿ ಅತ್ಯಧಿಕ 100 ಮಿ.ಮೀ. (10ಸೆ.ಮಿ.) ಮಳೆ ಸುರಿದಿದೆ. ಇದೇ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 77.8ಮಿ.ಮೀ. ಮಳೆಯಾಗಿದೆ. ಬೈಂದೂರಿನಲ್ಲಿ 92ಮಿ.ಮೀ, ಕುಂದಾಪುರದಲ್ಲಿ 91.8ಮಿ.ಮೀ., ಕಾಪುವಿನಲಿ 74.2 ಮಿ.ಮೀ, ಹೆಬ್ರಿಯಲ್ಲಿ 69.9ಮಿ.ಮೀ, ಉಡುಪಿಯಲ್ಲಿ 59.7 ಕಾರ್ಕಳದಲ್ಲಿ 51.4 ಮಿ.ಮೀ. ಮಳೆಯಾದ ವರದಿ ಬಂದಿದೆ.

Latest Indian news

Popular Stories