ಬ್ರಹ್ಮಾವರ ಕೃಷಿ ಕಾಲೇಜು ಉಳಿಸಲು ಸರಕಾರದ ನಿರ್ಧಾರ – ಐಕ್ಯ ಹೋರಾಟಕ್ಕೆ ಸಂದ ಜಯ – ಹೋರಾಟ ಸಮಿತಿ

ಉಡುಪಿ ಜಿಲ್ಲಾ ರೈತ ಸಂಘ, ಕ.ಪ್ರಾ.ರೈತ ಸಂಘ, ದಲಿತ ಸಂ.ಸಮಿತಿ, ಕ್ರಷಿಕೂಲಿಕಾರ ಸಂಘ, ಸಿಐಟಿಯು ಮತ್ತಿತರ ಸಂಘಟನೆಗಳು ನಡೆಸಿದ ಐಕ್ಯ ಹೋರಾಟದ ಫಲವಾಗಿ, ರಾಜ್ಯ ಸರಕಾರವು ಬ್ರಹ್ಮಾವರ ಕ್ರಷಿ ಕಾಲೇಜನ್ನು ಮುಂದುವರೆಸಲು ನಿರ್ಧರಿಸಿದೆ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಹೋರಾಟ ಸಮಿತಿ ಸಂಚಾಲಕರು ಹಾಗೂ ಮಾಜಿ ಸಭಾಪತಿಗಳು, ಕರ್ನಾಟಕ ರಾಜ್ಯ ವಿಧಾನ ಪರಿಷತ್ ಇವರಿಗೆ ದೂರವಾಣಿ ಮೂಲಕ ತಿಳಿಸಿದ್ದು, ಇದು ಜಿಲ್ಲೆಯ ಜನತೆಯ ಐಕ್ಯ ಹೋರಾಟಕ್ಕೆ ದೊರೆತ ಜಯವಾಗಿದೆ. ನಾವು ಸಲ್ಲಿಸಿದ ಮನವಿಯ ಮೇರೆಗೆ ಸೂಕ್ತ ನಿರ್ಧಾರ ಕೈಗೊಂಡ ಕ್ರಷಿ ಸಚಿವರನ್ನು ಹೋರಾಟ ಸಮಿತಿ ಅಭಿನಂದಿಸುತ್ತದೆ. ಸಹಕರಿಸಿದ ಉಸ್ತುವಾರಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿಯವರಿಗೂ ಕ್ರತಜ್ಙತೆ ಸಲ್ಲಿಸುತ್ತದೆ ಎಂದು ಹೋರಾಟ ಸಮಿತಿ ತಿಳಿಸಿದೆ.

ಈ ಹೋರಾಟದಲ್ಲಿ ಭಾಗವಹಿಸಿದ ವಿವಿದ ಸಂಘಟನೆಗಳ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ, ಪರೋಕ್ಷವಾಗಿ ಸಹಾಯ ಸಹಕಾರ ನೀಡಿದ ಎಲ್ಲರನ್ನೂ ಹೋರಾಟ ಸಮಿತಿ ಅಭಿನಂದಿಸುತ್ತದೆ. ಜಿಲ್ಲೆಯ ಜನತೆಯ ನೈಜ ಸಮಸ್ಯೆಗಳಿಗೆ ಇಂತಹ ಹೋರಾಟಗಳನ್ನು ಮುಂದುವರಿಸಲು ನೈತಿಕ ಬಲ ಸಿಕ್ಕಿದೆಯೆಂದು ‘ಸಮಿತಿ’ ಭಾವಿಸುತ್ತದೆ. ಎಂದು ಬ್ರಹ್ಮಾವರ ಕೃಷಿ ಕಾಲೇಜು ಹೋರಾಟ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Latest Indian news

Popular Stories