ಬೀದಿ ನಾಟಕದ ಮೂಲಕ ಆರೋಗ್ಯ ಶಿಕ್ಷಣ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಉಡುಪಿ ವತಿಯಿಂದ
ಜಿಲ್ಲಾ ಪಂಚಾಯತಿ ಉಡುಪಿ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದಲ್ಲಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ವಿದ್ಯಾರ್ಥಿಗಳಿಂದ ಬೀದಿನಾಟಕದ ಮೂಲಕ ಆರೋಗ್ಯ ಶಿಕ್ಷಣ ಅಭಿಯಾನ ಕಾರ್ಯಕ್ರಮವು ಮಾರ್ಚ್ 3 ರಂದು ಮಲ್ಪೆ ಬಸ್ ಸ್ಟ್ಯಾಂಡ್ ವೃತ್ತದ ಬಳಿ ಚಾಲನೆಗೊಂಡಿತು.

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವ ಅಧ್ಯಕ್ಷರಾದ ಶ್ರೀ ವಿಶ್ವನಾಥ ಶೆಣೈ ರವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾನಸಿಕ ಖಿನ್ನತೆ, ಆತ್ಮಹತ್ಯೆ ತಡೆ, ಹೆಣ್ಣು ಮಕ್ಕಳ ಆರೋಗ್ಯ ಮತ್ತು ಭ್ರೂಣಹತ್ಯೆ ತಡೆ, ಕ್ಷಯರೋಗದ ಜಾಗೃತಿ, ಉಚಿತ ಮತ್ತು ಕಡ್ಡಾಯ ಶಿಕ್ಷಣ, ಬಾಲಕಾರ್ಮಿಕ ತಡೆ ಇವುಗಳ ಕುರಿತಾದ ಮಾಹಿತಿ ಕಾರ್ಯಕ್ರಮವು ಬೀದಿನಾಟಕದ ಮೂಲಕ ಬಿತ್ತರಿಸಲ್ಪಟ್ಟಿತು.

ಯು.ಪಿ.ಎಂ.ಸಿಯ ವಿದ್ಯಾರ್ಥಿಗಳಾದ ಚಿಣ್ಣಪ್ಪ, ಹಿಮಲ್, ರಕ್ಷಾ ನಾಯಕ್, ಲಕ್ಷ್ಮೀ ಶೆಣೈ, ರಕ್ಷಿತಾ, ಆಶಿಕಾ, ಕಾವ್ಯ ಶೆಟ್ಟಿ, ಜೀವನ್ ಇವರು ಭಾಗವಹಿಸಿದ್ದ ಈ ನಾಟಕವನ್ನು ಕಲಾವಿದ ಶ್ರೀ ರಾಮಾಂಜಿ ಇವರು ನಿರ್ದೇಶಿಸಿದ್ದರು. ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕರಾದ ಶ್ರೀ ರವಿರಾಜ್ ಹೆಚ್.ಪಿ, ಸದಸ್ಯರಾದ ಶ್ರೀ ನರಸಿಂಹ ಮೂರ್ತಿ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಶ್ರೀ ಮಂಜುನಾಥ್ ಎನ್, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ನಿಶಾ ವಿ, ಯು.ಪಿ.ಎಂ.ಸಿಯ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲಾದ್ಯಂತ ಈ ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ

Latest Indian news

Popular Stories