UdupiPrime news
ಹೆಬ್ರಿ: ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕನಿಗೆ ಹಲ್ಲೆ ಆರೋಪ – ಪ್ರಕರಣ ದಾಖಲು

ಹೆಬ್ರಿ: ಕೆ.ಎಸ್.ಆರ್.ಟಿಸಿ ಬಸ್ ಚಾಲಕನಿಗೆ ಹಲ್ಲೆಗೈದ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ ಚಾಲಕ ಶಿವಾನಂದ (38) ಇವರು ಕೆ.ಎಸ್.ಆರ್.ಟಿ.ಸಿ ಇಲಾಖೆಯಲ್ಲಿ ಬಸ್ಸ ಚಾಲಕರಾಗಿ ಕೆಲಸವನ್ನು ಮಾಡಿಕೊಂಡಿದ್ದು ಶಿವಮೊಗ್ಗ ಬಸ್ಸು ನಿಲ್ದಾಣದಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಉಡುಪಿ ಕಡೆಗೆ ಆಗುಂಬೆ ಮಾರ್ಗವಾಗಿ ಬರುತ್ತಿರುವಾಗ ಅವರು ಮೇ 17 ರ ಬೆಳಿಗ್ಗೆ 10:15 ಗಂಟೆಗೆ ಸೊಮೇಶ್ವರ ಎಂಬಲ್ಲಿ ತಲುಪುವಾಗ ಆರೋಪಿಗಳಾದ ಅಬುಬುಕರ್ ಆರ್ಶಕ್ ,ಜುನೈದ್ ಮೊಹಮ್ಮದ್, ಮತ್ತು ರಿಜಾಖಾನ್ ರವರು ಕಾರಿನಲ್ಲಿ ಹಿಂದಿನಿಂದ ಕರ್ಕಶ ಶಬ್ದ ಮಾಡುತ್ತಾ ಬಂದು ಬಸ್ಸಿಗೆ ಅಡ್ಡವಾಗಿ ಕಾರನ್ನು ನಿಲ್ಲಿಸಿ ಅವರ ಭಾಷೆಯಲ್ಲಿ ಅವಾಚ್ಯ ಶಬ್ದ ಗಳಿಂದ ಬೈದು, ಕೈಯಿಂದ ಹೊಡೆದು ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದಾಗಿ ದೂರು ದಾಖಲಿಸಿದ್ದಾರೆ.
ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.