ಹೆಬ್ರಿ: ಅಕ್ರಮ ಕೋವಿ ಹಿಡಿದು ಸೋಮೇಶ್ವರ ಅಭಯಾರಣ್ಯ ಪ್ರವೇಶಿಸಿದ ಇಬ್ಬರ ಬಂಧನ

ಉಡುಪಿ: ಸೋಮೇಶ್ವರ ಅಭಯಾರಣ್ಯದೊಳಗೆ ಅಕ್ರಮ ಕೋವಿ ಹಿಡಿದು ಪ್ರವೇಶಿಸಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಮೇ 18 ರಂದು ಸೊಮೇಶ್ವರ ಅಭಯಾರಣ್ಯದ ಸೊಮೇಶ್ವರ ವನ್ಯಜೀವಿ ಘಟಕದ, ಹಳೇ ಸೊಮೇಶ್ವರ ಮೀಸಲು ಅರಣ್ಯದ ಕೆಳಅರಶಿನ ಮನೆ ಎಂಬಲ್ಲಿ ಅಕ್ರಮವಾಗಿ ಒಂಟಿ ನಳಿಕೆ ತೋಟ ಕೋವಿಯನ್ನು ಹಿಡಿದುಕೊಂಡು ಸೊಮೇಶ್ವರ ಅಭಯಾರಣ್ಯದೊಳಗೆ ಪ್ರವೇಶಿಸಿಗುಂಡು ಸಹಿತ ಒಂಟಿ ನಳಿಕೆ ತೋಟ ಕೋವಿಯನ್ನು ಹೊಂದಿರುವ ಸುರೇಂದ್ರ, ಸೀತಾರಾಮ ಇವರನ್ನು ಮತ್ತು ಅವರ ವಶದಲ್ಲಿದ್ದ ಒಂಟಿ ನಳಿಕೆ ತೋಟ ಕೋವಿ, ಕಾಡತೋಸು(ಗುಂಡು), ಹೆಡ್ ಲೈಟ್ ಮತ್ತು ಹ್ಯಾಂಡ್ ಲೈಟ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪ್ರಕರಣದ ಇನ್ನೋರ್ವ ಆರೋಪಿ ಸತ್ಯಾನಂದ ಇವರು ತಲೆ ಮರೆಸಿಕೊಂಡಿರುತ್ತಾರೆ. ಉಡುಪಿ

ಈ ಕೃತ್ಯವು ವನ್ಯಜೀವಿ ಸಂರಕ್ಷಣಾ ಕಾಯಿದೆ 1972 ಕಲಂ: 27,31, ಮತ್ತು 51 ರಂತೆ ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ:25 ರಂತೆ ಸ್ಪಷ್ಟ ಉಲಂಘನೆಯಾಗಿರುವ ಬಗ್ಗೆ ಅರಣ್ಯ ಅಪರಾಧ ಸಂಖ್ಯೆ 02/2024-25 ದಿನಾಂಕ 18/05/2024 ರಂದು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಸಿಕ್ಕ ಸುರೇಂದ್ರ ಮತ್ತು ಸೀತಾರಾಮ ರವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ದಿನಾಂಕ 19/05/2024 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಮಾನ್ಯ ನ್ಯಾಯಾಲಯವು ಆಪಾದಿತ ಸುರೇಂದ್ರ ಮತ್ತು ಸೀತಾರಾಮ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಆಪಾದಿತರು ಪ್ರಸ್ತುತ ಹಿರಿಯಡ್ಕ ಕಾರಾಗೃಹದಲ್ಲಿರುತ್ತಾರೆ.

ಪ್ರಕರಣವು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959 ಕಲಂ 25 ರಂತೆ ಸಂಬಂಧಪಟ್ಟಿರುವುದರಿಂದ ಪ್ರಕರಣದ ವಿಚಾರಣೆಯನ್ನು ಮಾಡಲು ನಮಗೆ ಅಧಿಕಾರವಿರುವುದಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2024 ಕಲಂ: 3, 25 ARMS ACT ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories