ಉಡುಪಿ : ಜಿಲ್ಲಾಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನೆರವೇರಿಸಲು ಕುಟುಂಬಸ್ಥರು ಮುಂದೆ ಬಾರದೆ ಅಸಹಾಯಕಳಾದ ಸಹೋದರಿಯ ನೋವಿಗೆ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ತಾವೇ ಮುಂದೆ ನಿಂತು ಅಂತ್ಯಕ್ರಿಯೆ ನಡೆಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಬ್ರಹ್ಮಾವರ ಠಾಣಾ ವ್ಯಾಪ್ತಿಯ ಗಣಪ ಪೂಜಾರಿ (60) ಎಂಬವರು ಅನಾರೋಗ್ಯದಿಂದ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು. ಮೃತರು ಅವಿವಾಹಿತರಾಗಿದ್ದು, ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಸ್ಪಂದಿಸಿಲ್ಲ. ಕೊನೆಗೆ ಮೃತರ ಸಹೋದರಿ ಮುಂದೆ ಬಂದರೂ, ಏನು ಮಾಡುವುದು ಎಂದು ತಿಳಿಯದೇ ಅಸಹಾಯಕರಾಗಿದ್ದರು.
ಈ ಬಗ್ಗೆ ಮಾಹಿತಿ ಪಡೆದ ವಿಶು ಶೆಟ್ಟಿ ಅವರು, ಮೃತ ವ್ಯಕ್ತಿಯ ಸಹೋದರಿಗೆ ಧೈರ್ಯ ತುಂಬಿ ತಾನೇ ಮುಂದಾಗಿ ನಿಂತು ಉಡುಪಿಯ ಬೀಡಿನಗುಡ್ಡೆಯ ರುದ್ರ ಭೂಮಿಯಲ್ಲಿ ಗುರುವಾರ ಅಂತ್ಯಸAಸ್ಕಾರವನ್ನು ನೆರವೇರಿಸಿ ಮಾನವೀಯತೆ ಮೆರೆದರು.
ಈ ಮಾನವೀಯ ಕಾರ್ಯದಲ್ಲಿ ಬಾರಕೂರು ವಲಯದ ಶೌರ್ಯ ವಿಪತ್ತು ಘಟಕದ ರಿಕ್ಷಾ ಚಾಲಕ ಅಶೋಕ ಪೂಜಾರಿ ನೆರವಾದರು. ಆಂಬುಲೆನ್ಸ್ ಹಾಗೂ ಅಂತ್ಯಕ್ರಿಯೆಯ ಖರ್ಚನ್ನು ವಿಶು ಶೆಟ್ಟಿ ಅವರೇ ಭರಿಸಿದರು.ಬ್ರಹ್ಮಾವರ ಠಾಣಾ ಮಹಿಳಾ ಆರಕ್ಷಕಿ ಜಯಶ್ರೀ ಕಾನೂನು ಪ್ರಕ್ರಿಯೆ ನಡೆಸಿ ಸಹಕರಿಸಿದರು.
——