ಹಿರಿಯಡ್ಕ: ಕಾರಾಗೃಹದೊಳಗೆ ಗಾಂಜಾ ಸಾಗಿಸಲು ಯತ್ನ – ಪ್ರಕರಣ ದಾಖಲು

ಉಡುಪಿ: ಹಿರಿಯಡ್ಕ ಕಾರಾಗೃಹದೊಳಗೆ ವಿಚಾರಣಾಧೀನ ಕೈದಿಯನ್ನು ಮಾತನಾಡಿಸಲು ಬಂದು ಗಾಂಜಾ ಸಾಗಾಟಕ್ಕೆ ಯತ್ನಿಸಿದ ಘಟನೆ ವರದಿಯಾಗಿದೆ.

ವಿಚಾರಣಾಧೀನ ಕೈದಿ ರೇವುನಾಥ ಯಾನೆ ಪ್ರೇಮನಾಥ (23) ಈತನ ಸಂದರ್ಶನಕ್ಕೆ ಮೇ 20 ರ ಸಾಯಂಕಾಲ 4.30 ಕ್ಕೆ ಆತನ ಸ್ನೇಹಿತರಾದ 1..ಸುದೀಶ ಮತ್ತು 2.ವರುಣ ಇವರು ಹಣ್ಣುಗಳು, ಬಿಸ್ಕೇಟ್‌ಗಳನ್ನು ತಂದಿದ್ದು ಮುಖ್ಯದ್ವಾರದಲ್ಲಿ ದ್ವಾರ ಪಾಲಕನಾಗಿ ಕರ್ತವ್ಯಕ್ಕೆ ಇದ್ದ ಸಂತೋಷ ದಗಾಟೆ ರವರ ಬಳಿ ಕೊಟ್ಟು, ವಿಚಾರಣಾ ಬಂದಿ ರೇವುನಾಥ ರವರಿಗೆ ಕೊಡಲು ತಿಳಿಸಿ ನಂತರ ಅಲ್ಲಿಂದ ವಿಚಾರಣಾ ಬಂದಿಯೊಂದಿಗೆ ಮಾತನಾಡಲು ಸಂದರ್ಶನ ಕೊಠಡಿಗೆ ಹೋಗಿ ಮಾತನಾಡಿ ಕಾರಾಗೃಹದಿಂದ ಹೊರ ಹೋಗಿರುತ್ತಾರೆ.

ನಂತರ ವಿಚಾರಣಾ ಬಂದಿಯ ಸ್ನೇಹಿತರು ತಂದಿದ್ದ ವಸ್ತುಗಳನ್ನು ಕಾರಗೃಹದ ಸಿಬ್ಬಂದಿಯವರಾದ ಸಹಾಯಕ ಜೈಲರ್, ದ್ವಾರಪಾಲಕರು ಮತ್ತು ದ್ವಾರ ಸಹಾಯಕ ರವರುಗಳು ಪರಿಶೀಲಿಸಿದಾಗ ಬಿಸ್ಕೇಟ್ ಮತ್ತು ಹಣ್ಣುಗಳ ಮಧ್ಯದಲ್ಲಿ ಗಾಂಜಾದಂತಹ ಸೊಪ್ಪು ಇರುವುದಾಗಿ ಸಿದ್ದರಾಮ ಪಾಟೀಲ, ಅಧೀಕ್ಷಕರು ಜಿಲ್ಲಾಕಾರಾಗೃಹ ಕಾಜರಗುತ್ತು ಅಂಜಾರು ಗ್ರಾಮ ಉಡುಪಿ ಜಿಲ್ಲೆ ಇವರಿಗೆ ತಿಳಿಸಿದ್ದು, ಬಂದು ಪರಿಶೀಲಿಸಲಾಗಿ ಬ್ಯಾಗ್ ನಲ್ಲಿ ಹಣ್ಣು ಮತ್ತು ಬಿಸ್ಕೇಟ್ ನ ಮದ್ಯ ಓಂದು ಪ್ಲಾಸ್ಟಿಕ್ ತೊಟ್ಟೆ ಯಲ್ಲಿ 10 ರಿಂದ 15 ಗ್ರಾಂ ನಷ್ಟು ಗಾಂಜಾದಂತೆ ತೋರುವ ಸೊಪ್ಪು ಕಂಡು ಬಂದಿದ್ದು ಆದ್ದರಿಂದ ನಿಷೇದಿತ ವಸ್ತುಗಳನ್ನು ಬಿಸ್ಕೇಟ್ ಹಾಗೂ ಹಣ್ಣುಗಳ ಮದ್ಯದಲ್ಲಿ ಸೇರಿಸಿ ಕಾರಾಗೃಹ ಓಳಗಡೆ ನುಸುಳಿಸಲು ಪ್ರಯತ್ನಿಸಿದ ವ್ಯಕ್ತಿಗಳ ವಿರುದ್ದ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2024 ಕಲಂ: 42 ಕರ್ನಾಟಕ ಕಾರಾಗೃಹ ಅಧಿನಿಯಮ (ತಿದ್ದುಪಡಿ) ಕಾಯಿದೆ 2022 ಹಾಗೂ (c) ,20(b) ii(A) ಎನ್‌ ಡಿಪಿಎಸ್‌ ಕಾಯಿದೆ ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

Latest Indian news

Popular Stories