ಹೂಡೆ: ಆರೋಗ್ಯ ಕೇಂದ್ರದ ಬಳಿ ಅವೈಜ್ಞಾನಿಕ ಕಾಮಗಾರಿ; ಕೃತಕ ನೆರೆ | ಅಂಗನವಾಡಿ ಪುಟಾಣಿಗಳಿಗೆ ತೀವ್ರ ಸಮಸ್ಯೆ | ತಕ್ಷಣ ತೆರವಿಗೆ ಸಾರ್ವಜನಿಕರ ಆಗ್ರಹ

ಹೂಡೆ: ಗ್ರಾಮದ ಆರೋಗ್ಯ ಕೇಂದ್ರದ ಬಳಿ ನೀರು ಹರಿದು ಹೋಗುವ ದಾರಿಯಲ್ಲಿ ನೀರಿಗೆ ತಡೆಯೊಡ್ಡುವ ರೀತಿಯಲ್ಲಿ ನಡೆದಿರುವ ಕಾಮಗಾರಿಯ ಕಾರಣ ಕೃತಕ ನೆರೆಯ ವಾತಾವರಣ ಸೃಷ್ಟಿಯಾಗಿದೆ.

ಇದರಿಂದಾಗಿ ಸಮೀಪದಲ್ಲೇ ಇರುವ ಅಂಗನವಾಡಿಯ ಪುಟಾಣಿಗಳಿಗೆ ನಡೆದಾಡಲು ಸಮಸ್ಯೆ ಸೃಷ್ಟಿಯಾಗಿದೆ. ಪ್ರಸ್ತುತ ಪ್ರದೇಶದಲ್ಲಿ ನೀರು ನಿಂತು ಸೊಳ್ಳೆಗಳು ಉತ್ಪತ್ತಿಯಾಗಿ ಮಕ್ಕಳ ಅನಾರೋಗ್ಯಕ್ಕೂ ಕಾರಣವಾಗುವ ಸಾಧ್ಯತೆ ಕಂಡು ಬರುತ್ತಿದೆ.

Screenshot 2024 06 11 10 17 14 91 6012fa4d4ddec268fc5c7112cbb265e7 Udupi, Civic issues Screenshot 2024 06 11 10 16 58 56 6012fa4d4ddec268fc5c7112cbb265e7 Udupi, Civic issues

ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಆಸ್ಪತ್ರೆಗೆ ಹೋಗುವ ರೋಗಿಗಳು ಸೇರಿದಂತೆ ಗ್ರಾಮಸ್ಥರು ಪ್ರತಿನಿತ್ಯ ನಡೆದಾಡುವ ದಾರಿಯಾಗಿದ್ದು ನೀರು ನಿಂತ ಕಾರಣ ನಡೆದಾಡಲು ಕಷ್ಟಪಡುವಂತಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದವರು ಈ ಕಾಮಗಾರಿ ನಡೆಸಿದ್ದು ಈಗಾಗಲೇ ಇದರ ವೈದ್ಯಾಧಿಕಾರಿಯ ಬಳಿ
ಕೆಮ್ಮಣ್ಣು ಗ್ರಾಮ ಪಂಚಾಯತ್ ಪಂಚಾಯತ್ ಅಧ್ಯಕ್ಷರು, ಪಿಡಿಒ, ವಾರ್ಡ್ ಸದಸ್ಯರು ಭೇಟಿ ನೀಡಿ ಸಮಜಾಯಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಅದನ್ನು ತೆರವುಗೊಳಿಸಲು ಅವರು ಒಪ್ಪಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ‌. 

ಸ್ವತಃ ಆರೋಗ್ಯ ಕೇಂದ್ರದವರು ದಾರಿ‌ಮಧ್ಯೆ ನಡೆಸಿರುವ ಕಾಮಗಾರಿಯ ಕುರಿತು ಪಂಚಾಯತ್ ಗಮನಕ್ಕೂ ತಂದಿಲ್ಲ ಎಂದು ಪಂಚಾಯತ್ ಸದಸ್ಯರು ಆರೋಪಿಸುತ್ತಿದ್ದು ಈ ಮುಂಚೆ 50 ವರ್ಷದಿಂದ ನಡೆದಾಡುತ್ತಿದ್ದ ದಾರಿಯನ್ನೂ ಮುಚ್ಚಿದ್ದಾರೆ. ದಶಕಗಳಿಂದ ಈ ಮಾರ್ಗದಿಂದಲೇ ನೀರು ಹರಿದು ತೋಡುಗಳಿಗೆ ಸೇರುತ್ತದೆ. ಈ ರೀತಿಯಾಗಿ ನೀರಿನ ಮಾರ್ಗ ಅವೈಜ್ಞಾನಿಕ ಕಾಮಗಾರಿಗಳ ಮುಖಾಂತರ ಮುಚ್ಚಿದರೆ ಸಮಸ್ಯೆ ಸೃಷ್ಟಿಯಾಗುತ್ತದೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಸಂಬಂಧ ಪಟ್ಟ ಇಲಾಖೆಯವರು ಈ ಪ್ರದೇಶದಲ್ಲಿ ನಡೆದಿರುವ ಅವೈಜ್ಞಾನಿಕ ಕಾಮಗಾರಿಯನ್ನು ತೆರವುಗೊಳಿಸಿ  ಅಂಗನವಾಡಿ ಸುತ್ತಮುತ್ತ‌ ನಿಂತಿರುವ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಜರುಗಿಸಬೇಕು. ಈಗಷ್ಟೇ ಮಳೆಗಾಲ ಆರಂಭವಾಗಿದೆ. ಮಳೆಗಾಲ ವೇಗ ಪಡೆಯುತ್ತಿದ್ದಂತೆ ಈ ಪ್ರದೇಶದಲ್ಲಿ ಮತ್ತಷ್ಟು ಸಮಸ್ಯೆ ಸೃಷ್ಟಿಯಾಗಲಿದೆ ಆದ್ದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆ ಬಗೆಹರಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ.

Latest Indian news

Popular Stories