UdupiCivic issues
ನೇಜಾರಿನ ತೃಪ್ತಿ ಲೇಔಟ್ ಬಳಿ ನೂತನ ಎಚ್.ಪಿ ಪೆಟ್ರೋಲ್ ಬಂಕ್ ಉದ್ಘಾಟನೆ – ನಾಗರಿಕರ ದೀರ್ಘ ಕಾಲದ ಸಮಸ್ಯೆಗೆ ಪರಿಹಾರ!

ಉಡುಪಿ: ನೇಜಾರಿನ ತೃಪ್ತಿ ಲೇಔಟ್ ಬಳಿ ನೂತನ ಎಚ್.ಪಿ ಪೆಟ್ರೋಲ್ ಬಂಕ್ ಉದ್ಘಾಟನೆ ಮಾಡಲಾಯಿತು.
ಹೂಡೆ, ಕೆಮ್ಮಣ್ಣು ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಜನರ ದೀರ್ಘ ಕಾಲದ ಸಮಸ್ಯೆಗೆ ಪರಿಹಾರ ದೊರಕಿದೆ. ಇಂದು ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಉದ್ಯಮಿ ಗಳಾದ ಪ್ರಸಾದ್ ಕಾಂಚನ್, ಇರ್ಷಾದ್ ನೇಜಾರು ಅವರು ಪೆಟ್ರೋಲ್ ಬಂಕ್’ನ್ನು ಉದ್ಘಾಟಿಸಿದರು.
ಈ ಮುಂಚೆ ಈ ಭಾಗದ ಜನ ವಾಹನಗಳಿಗೆ ಪೆಟ್ರೋಲ್ -ಡಿಸೇಲ್ ತುಂಬಿಸಲು ಸಂತೆಕಟ್ಟೆ ಪೆಟ್ರೋಲ್ ಬಂಕ್ ನ್ನು ಆಶ್ರಯಿಸಬೇಕಿತ್ತು. ಇದೀಗ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆಯಿಂದಾಗಿ ಈ ಭಾಗದ ಜನರ ದೊಡ್ಡ ಸಮಸ್ಯೆ ಪರಿಹಾರವಾಗಿದೆ.
ಈ ಸಂದರ್ಭದಲ್ಲಿ ಮಾಲಕರಾದ ಅಶೋಕ್ ಕುಮಾರ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.


