ಅಧಿಕಾರದಿಂದ ಇಳಿದು ಒಂದು ವರ್ಷವಾಗಿಲ್ಲ, ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ – ರಘುಪತಿ ಭಟ್ ವಿರುದ್ಧ ಅಸಮಾಧಾನ ಹೊರ ಹಾಕಿದ ಬಿ.ಎಲ್ ಸಂತೋಷ್

ಉಡುಪಿ: ನೈರುತ್ಯ ಪದವೀಧರ, ಶಿಕ್ಷಕ ಕ್ಷೇತ್ರ ಚುನಾವಣೆ ಹಿನ್ನಲೆಯಲ್ಲೊ ಉಡುಪಿಯ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಘಟ ನಾಯಕರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು.

ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, “
ರಘುಪತಿ ಭಟ್, ಈಶ್ವರಪ್ಪ ವಿರುದ್ಧ ಅಸಮಾಧಾನ ಹೊರಹಾಕಿದರು. ನಮ್ಮ ಅಭ್ಯರ್ಥಿ ವಿರುದ್ಧ ರಘುಪತಿ ಭಟ್ ಸ್ಪರ್ಧೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಮಹಾಭಾರತದ ಅರ್ಜುನನ ಸ್ಥಿತಿ ಎದುರಾಗಿದೆ.
ಎದುರು ನಿಂತ ದೊಡ್ಡಪ್ಪ ಚಿಕ್ಕಪ್ಪನ ವಿರುದ್ದ ಯುದ್ಧ ಮಾಡಬೇಕಾಗಿದೆ. ಗುರುಗಳು, ತಾತ ಅಣ್ಣ ತಮ್ಮ ಎದುರು ನಿಂತಿದ್ದಾರೆ ಹೇಗೆ ಬಾಣ ಹೂಡಲಿ ಎಂದು ಆಲೋಚಿಸಬೇಡಿ. ಯುದ್ಧದಲ್ಲಿ ನಮ್ಮ ನಿಲುವು ತಗೋಬೇಕು ಎದುರಾಳಿಯನ್ನು ಉಳಿಯಲು ಬಿಡಬೇಡಿ. ಬಿಜೆಪಿಯ ಮೂರು ರಾಷ್ಟ್ರೀಯ ಅಧ್ಯಕ್ಷರು ಬಂಡಾಯ ಎದ್ದರು. ದೇಶದಲ್ಲಿ ಬಿಜೆಪಿ ಶಕ್ತಿಯುತವಾಗುತ್ತ ಹೋಗುತ್ತಿದೆ. ಅಧಿಕಾರದಲ್ಲಿ ಏನು ಅಯಸ್ಕಾಂತ ಇದೆಯಾ? ಅಂತಾ ಮ್ಯಾಗ್ನೆಟ್ ಏನಿದೆ
ಅವರಿಗೇ ಒಬ್ಬರಿಗೇ ಟಕೆಟ್ ಕೊಡಬೇಕುಕು ಎಂದರೆ ನಾವೆಲ್ಲಿ ಹೋಗಬೇಕು ಎಂದು ಅಸಮಾಧಾನ ಹೊರ ಹಾಕಿದರು.

ಅಧಿಕಾರದಿಂದ ಇಳಿದು ಸರಿಯಾಗಿ ಒಂದು ವರ್ಷ ಆಗಿಲ್ಲ. ಕೆಲವರು ಅಧಿಕಾರ ಇಲ್ಲದೆ ಗುಟ್ಕಾ , ಸಾರಾಯಿ ಬಿಟ್ಟವರ ತರ ಆಡ್ತಾಯಿದ್ದಾರೆ. ರಾಮಮಂದಿರ, ಹಿಂದೂ ಹಿತ, ಸ್ಥಳೀಯ ಸಮಸ್ಯೆಗೆ ನೀವು ಬಂಡಾಯ ಎದ್ದಿದ್ದೀರಾ? ನಿಮ್ಮ ಆತ್ಮಸಾಕ್ಷಿ ಎಷ್ಟಿದೆ ಎಂದು ಎಲ್ಲರ ಮುಂದೆ ಪ್ರದರ್ಶನ ಆಗಿದೆ. ಸಾರ್ವಜನಿಕ ಹಿತ ಮತ್ತು ವ್ಯಕ್ತಿಗತ ಸ್ವಾರ್ಥದಿಂದ ನಿರ್ಧಾರ ತೆಗೆದುಕೊಂಡಿದ್ದೀರಿ.
ಸಮಾಜಹಿತ ಮತ್ತು ಸಂಘಟನೆಯೇ ನಮ್ಮ ಧರ್ಮ
ಮೂರು ದಿನಗಳ ಒಳಗೆ ಬಿಟ್ಟುಹೋದವರನ್ನು ಪಕ್ಷಕ್ಕೆ ಕರೆದುಕೊಂಡು ಬನ್ನಿ. ಇದು ಪವಾಡ ಪುರುಷರ ಕಾಲ ಅಲ್ಲ. ಸಂಘಟನೆಗೆ ಮಾತ್ರ ಶಕ್ತಿ ಬಹುಮತದಿಂದ ಮಾತ್ರ ನಿರ್ಧಾರಗಳು ಸಾಧ್ಯ. ಅಧಿಕಾರದ ಆಸೆಯಿಂದ ಹೋಗುವವರ ಜೊತೆ ಗೆರೆದಾಟಿ ಹೋಗಬೇಡಿ ಎಂದು ಸಂತೋಷ್ ಹೇಳಿದರು.

ವಿಧಾನ ಪರಿಷತ್ ಗೆ ಒಳ್ಳೇ ಸಂಖ್ಯೆ ಬೇಕು. ಪರಿಷತ್ ಮತ್ತು ವಿಧಾನಸಭೆಗಳು ಜೋಡೆತ್ತುಗಳಂತೆ
ಈಗಿನ ರಾಜ್ಯದ ಪರಿಸ್ಥಿತಿ ಗೆ ಸಂಖ್ಯೆ ಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸ್ತಾ ಇಲ್ಲ. ಅಲ್ಟ್ರಾ ಎಕ್ಸ್ ಟೀಂ ಎಡಪಂಥೀಯರು ಆಡಳಿತ ನಡೆಸ್ತಾ ಇದಾರೆ. ಸ್ಟೇಟ್ ಎಜ್ಯುಕೇಷನ್ ಪಾಲಿಸಿ ಮಾಡಿದ್ರು ಇದಕ್ಕೆ ಸಂಬಂಧಿಸಿದ ಕಮಿಟಿಯಲ್ಲಿ ಹಿಂದೂ ವಿರೋಧಿಗಳನ್ನ ತುಂಬಿದ್ದಾರೆ. ದೇಶ ಮೊದಲು ಅನ್ನೋದನ್ನು ವಿರೋದಿಸುವವರೇ ಇಲ್ಲಿ ಸೇರಿದ್ದಾರೆ. ಎಸ್ ಇ ಪಿ ಇವತ್ತಿನ ವರೆಗೂ ಫಾರ್ಮ್ ಆಗಿಲ್ಲ. ರಾಜ್ಯ ಸರ್ಕಾರದಲ್ಲಿ ತಾಳ ಮೇಳದ ಕೊರತೆ ಇದೆ ಎಂದರು.

ಇಬ್ಬರಿಗೂ ಇಲ್ಲಿ ಅಧಿಕಾರದ ಆಸೆ. ಒಬ್ಬರಿಗೆ ಸ್ಥಾನ ಉಳಿಸಿಕೊಳ್ಳುವ ಆಸೆಯಾದರೆ ಮತ್ತೊಬ್ಬರಿಗೆ ಅಲ್ಲಿ ಬಂದು ಕೂರುವ ಆಸೆ.ನೇಹಾ ಪ್ರಕರಣ ,ಉಡುಪಿ ಘಟನೆ, ರಾಮೇಶ್ವರಂ ಕೆಫೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ನಿದರ್ಶನವಾಗಿದೆ ಎಂದರು.

ಉಚಿತ ಭಾಗ್ಯಗಳನ್ನು ಬಡವರು ತೆಗೆದುಕೊಳ್ಳುತ್ತಾರೆ ತಗೊಳ್ಳಲಿ. ಆದರೆ ರಾಜ್ಯದ ಆರ್ಥಿಕತೆಯ ಸಮತೋಲನ ಕಾಪಾಡಬೇಕಲ್ವಾ. ರಾಜ್ಯದಲ್ಲಿ ಈಗ ಸಂಬಳ ಕೊಡೊಕೂ ದುಡ್ಡಿಲ್ಲ. ಚುನಾವಣೆಯ ನಂತರ ಯಾವ ಬಿಟ್ಟಿ ಭಾಗ್ಯನೂ ಸಿಗಲ್ಲ. ಅಕ್ಕಿ ಹಣ ಇನ್ನೂ ಬಂದಿಲ್ಲ. ಗ್ಯಾರೆಂಟಿ ಯೋಜನೆಗಳು ಬದ್ಧತೆ ಅಲ್ಲ ಚುನಾವಣಾ ರಾಜಕೀಯವಾಗಿದೆ. ರಾಜ್ಯ ಸರ್ಕಾರದಲ್ಲಿ ಅಧಿಕಾರಿಗಳು ಯಾವುದೇ ಆದೇಶಗಳಿಗೆ ಸೈನ್ ಹಾಕಲ್ಲ. ಕರ್ನಾಟಕದ ಸ್ಥಿತಿಯು ತೆಲಂಗಾಣದಂತೆ ಆಗಿದೆ ಎಂದು ಹೇಳಿದರು.

Latest Indian news

Popular Stories