ಕಾಪು | ಕಟ್ಟಡ ಸಾಮಗ್ರಿ ಸಾಗಾಟದ ಟೆಂಪೋ ಪಲ್ಟಿ; ಚಾಲಕ ಪಾರು

ಕಾಪು: ಕಟ್ಟಡ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಮಿನಿ ಟೆಂಪೋವೊಂದು ಹೆದ್ದಾರಿಗೆ ಅಡ್ಡವಾಗಿ ಮಗುಚಿ ಬಿದ್ದ ಘಟನೆ ಕೊಪ್ಪಲಂಗಡಿಯಲ್ಲಿ ಪೆ. 10ರ ಶನಿವಾರ ಬೆಳಗ್ಗೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿ ಬಳಿ ಮಂಗಳೂರಿನಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಅಡ್ಡ ಬಿದ್ದಿದ್ದು ಇದರಿಂದಾಗಿ ಟೆಂಪೋದಲ್ಲಿದ್ದ ಸಾಮಾಗ್ರಿಗಳು ರಸ್ತೆಗೆ ಅಡ್ಡ ಬಿದ್ದಿವೆ.

ಟೆಂಪೋ ಕೂಡ ರಸ್ತೆಗೆ ಅಡ್ಡವಾಗಿ ಬಿದ್ದಿದ್ದು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಹೆದ್ದಾರಿಗೆ ಅಡ್ಡ ಬಿದ್ದಿರುವ ಟೆಂಪೋವನ್ನು ತೆರವುಗೊಳಿಸಲು ಶ್ರಮಿಸುತ್ತಿದ್ದಾರೆ.

Latest Indian news

Popular Stories