ಸಾಂದರ್ಭಿಕ ಚಿತ್ರ
ಕಾಪು: ಮೀನುಗಾರಿಕೆಗೆ ತೆರಳಿದ್ದ ಟ್ರಾಲ್ ಬೋಟನ್ನು ಅಡ್ಡಗಟ್ಟಿ ಎರಡು ಲಕ್ಷ ಮೌಲ್ಯದ ಹನ್ನೆರಡು ಬಾಕ್ಸ್‌ಮೀನು, 4 ಮೊಬೈಲ್ ಸುಲಿಗೆಗೈದ ಘಟನೆಯ ಕುರಿತು ಪ್ರಕರಣ ದಾಖಲಾಗಿದೆ.
ಮಹಮ್ಮದ್ ಮುಸ್ತಫ್ ಬಾಷಾ ರವರಿಗೆ ಸೇರಿದ MIRASH–II IND-KA01-MM-2497 ನೊಂದಣಿ ನಂಬ್ರದ ಟ್ರಾಲ್ ಬೋಟ್ ಆಗಿದ್ದು ದೂರಿನ ಪ್ರಕಾರ
ದಿನಾಂಕ 27/01/2024 ರಂದು ಬೋಟ್ ನಲ್ಲಿ ಮೀನು ಹಿಡಿಯಲು ಆಂದ್ರಪ್ರದೇಶದ ಮೀನುಗಾರರಾದ 1) ಪರ್ವತಯ್ಯ, 2) ಕೊಂಡಯ್ಯ 3) ರಘುರಾಮಯ್ಯ, 4) ಶಿವರಾಜ್ 5)ಕೆ.ಶೀನು, 6)ಏಳುಮಲೆ 7)ಚಿನ್ನೋಡು 8) ರಾಜು ರವರುಗಳು ಮಂಗಳೂರು ಬಂದರಿನಿಂದ ಹೊರಟಿದ್ದು, ಸಮುದ್ರದ ಒಳಭಾಗದಲ್ಲಿ ಮೀನುಗಳನ್ನು ಹಿಡಿದುಕೊಂಡು ಮಂಗಳೂರು ಬಂದರಿಗೆ ವಾಪಾಸ್ಸು ಹೋಗುತ್ತಿದ್ದ ಸಂದರ್ಭದಲ್ಲಿ ಮಂಗಳವಾರ ಬೆಳಿಗ್ಗೆ 5 ಗಂಟೆಗೆ ಕಾಪು ಲೈಟ್ ಹೌಸ್ ನಿಂದ 10 ನಾಟಿಕಲ್ ಮೈಲ್ ದೂರದಲ್ಲಿದ್ದ ಸಮಯ ತಮ್ಮ ಟ್ರಾಲ್ ಬೋಟ್ ನ ಎದುರಿಗೆ ಬಂದ ಪರ್ಶಿನ್ ಬೋಟ್ ನಲ್ಲಿದ್ದ 15-20 ಜನರ ಪೈಕಿ 7-8 ಜನರು ಟ್ರಾಲ್ ಬೋಟ್ ಒಳಗೆ ಹತ್ತಿ ಬೋಟ್ ನಲ್ಲಿದ್ದ ಮೀನಿನ್ ಬಾಕ್ಸ್ ಗಳನ್ನು ತೆಗೆದು ಅವರ ಪರ್ಶಿನ್ ಬೋಟ್ ಗೆ ಹಾಕಿಕೊಂಡಿದ್ದಾರೆ. ಆ ಸಮಯ ಅವರನ್ನು ತಡೆಯಲು ಹೋದ ಟ್ರಾಲ್ ಬೋಟ್ ನ ಮೀನುಗಾರರ ಪೈಕಿ ಶೀನು ಮತ್ತ ರಘು ರಾಮಯ್ಯ ರವರನ್ನು ಫರ್ಶಿನ್ ಬೋಟ್ ಪಕ್ಕದಲ್ಲಿ ಬಂದ 5-7 ಜನರಿದ್ದ ನಾಡ ದೋಣಿಗೆ ಎತ್ತಿ ಹಾಕಿಕೊಂಡು ನಾಡ ದೋಣಿಯು ಅಲ್ಲಿಂದ ಹೋಗಿರುತ್ತದೆ.
ಬಳಿಕ ಫರ್ಶಿನ್ ಬೋಟ್ ನಲ್ಲಿದ್ದವರು ಟ್ರಾಲ್ ಬೋಟ್ ನಲ್ಲಿದ್ದ 6 ಜನಕ್ಕೆ ಕೈಯಿಂದ ಹಾಗೂ ಮರದ ರೀಫ್ ನಿಂದ ಹಲ್ಲೆ ನಡೆಸಿದ್ದಾರೆ. ಆ ವೇಳೆಗೆ ನಾಡ ದೋಣಿಯಲ್ಲಿ ಕರೆದುಕೊಂಡು ಹೋದ ಶೀನು ಮತ್ತ ರಘು ರಾಮಯ್ಯ ರವರನ್ನು ವಾಪಸ್ಸು ಕರೆದುಕೊಂಡು ಬಂದು ಟ್ರಾಲ್ ಬೋಟ್ ಗೆ ಹಾಕಿ ಮೀನುಗಾರರ 4 ಮೋಬೈಲ್ ಗಳನ್ನು ಹಾಗೂ 2 ಲಕ್ಷ ಮೌಲ್ಯದ 12 ಬಾಕ್ಸ್ ಮೀನುಗಳನ್ನು ಸುಲಿಗೆ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿರುವ ಕುರಿತು ದೂರು ನೀಡಲಾಗಿದೆ.
ಹಲ್ಲೆ ನಡೆಸಿದ ಪರಿಣಾಮ ಪರ್ವತಯ್ಯ ರವರ ಬಲಗಾಲಿನ ಮೂಳೆ ಮುರಿತವಾಗಿದ್ದು, ಕೊಂಡಯ್ಯ ರವರ ಸೊಂಟದ ಭಾಗಕ್ಕೆ ಗಂಭೀರ ಗಾಯವಾಗಿದ್ದು, ರಘುರಾಮಯ್ಯ ರವರ ಎಡಗೈ ಮೂಳೆ ಮುರಿತವಾಗಿ ಎಡಗಾಲಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ ಮತ್ತು ಶಿವರಾಜ್ ಹಾಗೂ ಶೀನು ರವರಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿರುತ್ತವೆ. ಟ್ರಾಲ್ ಬೋಟ್ ನಲ್ಲಿದ್ದ ಮೀನುಗಾರರು ಘಟನೆಯ ಸಮಯ ಹಲ್ಲೆ ನಡೆಸಿ ಸುಲಿಗೆ ಮಾಡಿಕೊಂಡು ಹೋದವರನ್ನು ಹಾಗೂ ಬೋಟ್ ನ ಹೆಸರನ್ನು ಬೋಟ್ ನಲ್ಲಿದ್ದ ಲೈಟ್ ಸಹಾಯದಿಂದ ನೋಡಿರುತ್ತಾರೆ.
ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಯಲ್ಲಿ 395, 397, 323, 324, 326 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.