ಬಾಲ್ಯದಲ್ಲಿ ಪ್ರೀತಿ ಸಿಗದ ಮಕ್ಕಳು, ಸಮಾಜದಲ್ಲಿ ದುಷ್ಟರಾಗಿ ಬೆಳೆಯುತ್ತಾರೆ. ಸಯೀದ್ ಇಸ್ಮಾಯಿಲ್

ಕಾಪು : ಮಕ್ಕಳಿಗೆ ತಮ್ಮ ಮನೆಯಲ್ಲಿ ತಂದೆ, ತಾಯಿ, ಸಹೋದರ, ಸಹೋದರಿಯರಿಂದ ಪ್ರೀತಿ ಸಿಗಬೇಕು. ಅದು ಸಿಗದಿದ್ದಲ್ಲಿ ಅವರಲ್ಲಿ ಕ್ರೂರತನ ಮೂಡಿ , ಮುಂದೆ ಅವರು ಸಮಾಜದಲ್ಲಿ ದುಷ್ಟರಾಗಿ ಬೆಳೆಯಲು ಕಾರಣವಾಗುತ್ತದೆ.

IMG 20240707 WA0004 Kapu

ತಮ್ಮ ಮಕ್ಕಳು ಒಳ್ಳೆಯವರಾಗಬೇಕಿದ್ದಲ್ಲಿ , ಹೆತ್ತವರು ಕೂಡಾ ಒಳ್ಳೆಯವರಾಗಬೇಕಾಗುತ್ತದೆ. ಮಕ್ಕಳ ಮುಂದೆ ತಂದೆ, ತಾಯಿ, ಸಹೋದರ, ಸಹೋದರಿಯರು ಜಗಳವಾಡುತಿದ್ದರೆ ಮಕ್ಕಳ ಮೇಲೆ ಅದರ ದುಷ್ಪರಿಣಾಮಬೀರುತ್ತದೆ ಎಂದು ಜಮಾ ಆತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಜನಾಬ್ ಸಯೀದ್ ಇಸ್ಮಾಯಿಲ್ ರವರು ಹೇಳಿದರು. ಅವರು, ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಷನ್ ಕರ್ನಾಟಕ ರಾಜ್ಯದ ವತಿಯಿಂದ ನಡೆದ ಸರ್ಟಿಫಿಕೇಟ್ ಮತ್ತು ಡಿಪ್ಲೋಮ ಕೋರ್ಸ್ ನ ಪರೀಕ್ಷೆಯಲ್ಲಿ, ಕಾಪು ಸೆಂಟರ್ ನಲ್ಲಿ ಭಾಗವಹಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕಾಪುವಿನ ಹೊಟೇಲ್ ಕೆ. ಒನ್. ನಲ್ಲಿ ಜಮಾ ಆತೆ ಇಸ್ಲಾಮೀ ಹಿಂದ್ ವರ್ತುಲವು ಹಮ್ಮಿಕೊಂಡ, ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುತ್ತಾ ಮಾತಾಡಿದರು.

ಮುಂದುವರಿಯುತ್ತಾ ಅವರು, ಹಲವು ಜ್ಞಾನ ಮನುಷ್ಯನಿಗೆ ಸ್ರಷ್ಟಿಕರ್ತನಿಂದ ದೊರಕುವ ಕಾರಣ ಆತ ಹೊಸ ಹೊಸ ಕೊಡುಗೆಗಳನ್ನು ಸಮಾಜಕ್ಕೆ ನೀಡುತ್ತಾನೆ. ಮೌಲ್ಯಧಾರಿತ ಶಿಕ್ಷಣವನ್ನು ನಾವು ಪಡೆದು ಅದನ್ನು ಸಮಾಜದಲ್ಲಿ ಕಾಪಾಡಿಕೊಂಡು ಬರುವುದು ನಮ್ಮ ಹೊಣೆಗಾರಿಕೆಯಾಗಿದೆ ಎಂದರು.
ಮುಖ್ಯ ಅತಿಥಿ ಯಾಗಿ ಭಾಗವಹಿಸಿದ ಖದೀಜ ಹುದಾ ರವರು, ಲೌಕಿಕ ವಿದ್ಯಾಭ್ಯಾಸ ಮನುಷ್ಯನ ಇಹ ಲೋಕದ ಜೀವನಕ್ಕೆ ಸಹಕಾರಿಯಾದರೆ, ಆದ್ಯಾತ್ಮಿಕ ಶಿಕ್ಷಣವು ಆತನ ಪರಲೋಕದ ಜೀವನಕ್ಕೆ ಸಹಕಾರಿಯಾಗುತ್ತದೆ.

ಆದ ಕಾರಣ ಮಾನವನು ಇಹಲೋಕದ ಶಿಕ್ಷಣವನ್ನು ದಪಡೆಯುದರೊಂದಿಗೆ, ಆಧ್ಯಾತ್ಮಿಕ ಶಿಕ್ಷಣವನ್ನೂ ಪಡೆದು ಇಹ ಮತ್ತು ಪರಲೋಕದ ಜೀವನದಲ್ಲಿ ಯಶಸ್ವಿಯಾಗಲು ಪ್ರಯತ್ನಿಸಬೇಕು ಎಂದರು.
ಇಂದಿನ ಕಾಲದಲ್ಲಿ ಮನುಷ್ಯನು ಉನ್ನತ ಮಟ್ಟದಲ್ಲಿ ವಿದ್ಯಾಭ್ಯಾಸ ಪಡೆದು ಸಮಾಜದಲ್ಲಿ ಗುರುತರವಾದ ಸ್ಥಾನ ಮಾನ ಪಡೆದಿರುತ್ತಾನೆ. ಆದರೆ ಆತನು ಕುಟುಂಬದವರೊಂದಿಗೆ ನಿರ್ದಯಿ ಯಾಗಿ ವರ್ತಿಸುತ್ತಾನೆ. ವ್ರದ್ಧ ತಂದೆ, ತಾಯಿಯವರ ಸೇವೆ ಮಾಡದೇ, ಸಹೋದರಿಯರ ಹಕ್ಕು ಕೊಡದೆ ಶೋಷಿಸಿದರೆ ಅವರು ಪಡೆದ ವಿದ್ಯಾಭ್ಯಾಸಕ್ಕೆ ಯಾವುದೇ ಬೆಲೆ ಇರುದಿಲ್ಲವೆಂದು ಜನಾಬ್ ಶಾನವಾಜ್ ರವರು ಅತಿಥಿ ಭಾಷಣದಲ್ಲಿ ಹೇಳಿದರು.

ಇನ್ನೊರ್ವ ಮುಖ್ಯ ಅತಿಥಿಯಾಗಿರುವ ಶಭೀ ಅಹಮದ್ ಕಾಝಿ ಯವರು ಸಂದೊರ್ಬೋಚಿತವಾಗಿ ಮಾತಾಡಿದರು.ಕಾರ್ಯಕ್ರಮವು ಮುಹಮ್ಮದ್ ರಾಯಿಫ್ ರವರ ಕುರ್ ಆನ್ ಪಠಣದೊಂದಿಗೆ ಪ್ರಾರಂಭವಾಯಿತು.ಜಮಾ ಆತೆ ಇಸ್ಲಾಮೀ ಹಿಂದ್ ಕಾಪು ವರ್ತುಲದ ಸ್ಥಾನೀಯ ಅಧ್ಯಕ್ಷರಾದ ಅನ್ವರ್ ಅಲಿ ಯವರು ಸ್ವಾಗತ ಮತ್ತು ಪ್ರಾಸ್ತವಿಕ ಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಬಿ. ಐ. ಇ ಯ ವಿದ್ಯಾರ್ಥಿಗಳಿಗೆ ಸಯೀದ್ ಇಸ್ಮಾಯಿಲ್ ರವರು ಪ್ರಶಸ್ತಿ ಪ್ರದಾನ ಮಾಡಿ ಸರ್ಟಿಫಿಕೇಟ್ ವಿತರಿಸಿದರು.
ವಿದ್ಯಾರ್ಥಿಗಳ ಪಟ್ಟಿಯನ್ನು ಮಸ್ನಾ ಮುಳೂರು ಓದಿದರು. ಎಸ್. ಐ. ಓ ನ ಸ್ಪರ್ಧೆಯ ವಿಜೇತರಿಗೆ ಶಭೀ ಅಹಮದ್ ಕಾಝಿ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳ ಪಟ್ಟಿಯನ್ನು ಮುಹಮ್ಮದ್ ಸೈಫ್ ರವರು ಓದಿದರು.

ವಿದ್ಯಾರ್ಥಿಗಳಿಗೆ ಸ್ಕಾಲರ್ಷಿಪ್ , ಶಾನವಾಜ್ ರವರು ವಿತರಿಸಿದರು.ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳಿಗೆ ಅನ್ವರ್ ಅಲಿ ಮತ್ತು ಮಹಿಳಾ ವರ್ತುಲದ ಸಂಚಾಲಕಿ ಶೇಹೆನಾಜ್ ರವರು ನೆನಪಿನ ಕಾಣಿಕೆ ನೀಡಿದರು.ವರ್ತುಲದ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದ ನೀಡಿದರು.
ಅಬ್ದುಲ್ ಖಾಲಿದ್ ರವರು ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಯಿತು.

Latest Indian news

Popular Stories