ಕಾಪು: ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಕಾಪು: ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡ ಘಟನೆ ಶುಕ್ರವಾರ ಮುಂಜಾನೆ ಮಲ್ಲಾರು ಚುಕ್ಕು ತೋಟದಲ್ಲಿ ನಡೆದಿದೆ.

ಮಲ್ಲಾರು ಚುಕ್ಕು ತೋಟ ನಿವಾಸಿ ಮೊಹಿಸಿನಾ (34) ಎಂಬಾಕೆ ಆತ್ಮಹತ್ಯೆಗೆ ಶರಣಾದ ಮಹಿಳೆ.

ಪತಿಯ ಮನೆಯಲ್ಲಿದ್ದ ಮೊಹಿಸಿನಾ ತಂದೆಯ ನಿಧನ ನಂತರ ಖಿನ್ನತೆಗೊಳಗಾಗಿದ್ದರು. ಅವರಿಗೆ 7 ವರ್ಷ ಮತ್ತು 1 ವರ್ಷ 9 ತಿಂಗಳ ಮಗು ಇದೆ.‌ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories