ಕಾಪುವಿನಲ್ಲಿ ಮಾರಕಾಯುಧಗಳೊಂದಿಗೆ ಸೆರೆಯಾದವರು ದರೋಡೆಕೋರರಲ್ಲ, ಕೊಲೆ ನಡೆಸಿದ ಹಿನ್ನೆಲೆ ಇರುವವರು: SDPI

ನಿನ್ನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ದುಷ್ಕೃತ್ಯವನ್ನು ನಡೆಸಲು ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಕಾರಿನಲ್ಲಿ ತಿರುಗುತ್ತಿದ 6 ಜನ ಸಂಘ ಪರಿವಾರದ ಕ್ರಿಮಿನಲ್ ಹಿನ್ನೆಲೆ ಯುವಕರನ್ನು ಪೊಲೀಸರು ಬಂಧಿಸುವ ಮೂಲಕ ದೊಡ್ಡ ಸಚೊಂದನ್ನು ವಿಫಲಗೊಳಿಸಿದ್ದಾರೆ. ಬಂಧಿತರಲ್ಲಿ ಓರ್ವ ಕಳೆದ ವರ್ಷ ಸುರತ್ಕಲ್ನಲ್ಲಿ ಫಾಜಿಲ್ ಎಂಬ ಯುವಕನನ್ನು ಕೊಲೆಮಾಡಿದ ಆರೋಪದಲ್ಲಿ ಜೈಲಿಗೆ ಹೋಗಿ ಜಾಮೀನಿನಲ್ಲಿ ಹೊರಬಂದಿರುವ ಮತ್ತು ಗಡಿಪಾರು ಆದೇಶದಲ್ಲಿರುವ ಪ್ರಮುಖ ಆರೋಪಿ. ಇನ್ನು 2 ದಿನಗಳಲ್ಲಿ ಲೋಕಸಭೆ ಚುನಾವಣೆ ಫಲಿತಾಂಶ ಹೊರಬರಲಿದ್ದು ಜಿಲ್ಲೆಯ ಶಾಂತಿಯನ್ನು ಕದಡುವ ದೃಷ್ಟಿಯಿಂದಲೂ ಈ ಯುವಕರು ಸಂಚು ರೂಪಿಸಿರುವ ಸಾದ್ಯತೆಗಳು ಅಲ್ಲಗಳೆಯುವಂತಿಲ್ಲ ಆದ್ದರಿಂದ ಪೊಲೀಸರು ಇದೊಂದು ದರೋಡೆಯ ಸಂಚು ಎಂದು ಬಣ್ಣಿಸದೆ, ಅವರ ನೈಜ ಉದ್ದೇಶ ಏನಿತ್ತು ಅದನ್ನು ಹೊರ ತರುವನಿಟ್ಟಿನಲ್ಲಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಕೂಲಂಕಷವಾಗಿ ತನಿಖೆಗೊಳಪಡಿಸಿ ಇದರ ಹಿಂದಿರುವ ಷಡ್ಯಂತರವನ್ನು ಬಯಲಿಗೆಳೆಯಬೇಕು ಹಾಗೂ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಅದೇ ರೀತಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಫಾಝಿಲ್ ಕೊಲೆ ಆರೋಪಿ ಅಭಿಷೇಕ್ ನ ಜಾಮೀನನ್ನು ರದ್ದು ಪಡಿಸಲು ಪೊಲೀಸ್ ಇಲಾಖೆ ಈ ಘಟನೆಯನ್ನು ಆಧಾರವಾಗಿಸಿ ನ್ಯಾಯಾಲಯಕ್ಕೆ ಬೇಡಿಕೆ ಇಡಬೇಕು.


ಇತ್ತೀಚಿನ ದಿನಗಳಲ್ಲಿ ಉಡುಪಿಯಲ್ಲಿ ಇಂತಹ ಯುವಕರ ಕ್ರಿಮಿನಲ್ ಕೃತ್ಯಗಳು ಹೆಚ್ಚಾಗುತ್ತಿದ್ದು ಜಿಲ್ಲೆಯ ಜನ ಆತಂಕಕೀಡಾಗಿದ್ದಾರೆ. ಆದ್ದರಿಂದ ಪೊಲೀಸ್ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯ ಶಾಂತಿಯನ್ನು ಕಾಪಾಡಬೇಕು ಎಂದು SDPI ಉಡುಪಿ ಜಿಲ್ಲಾದ್ಯಕ್ಷರಾದ ಶಾಹಿದ್ ಆಲಿ ಯವರು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.

Latest Indian news

Popular Stories