ಕಾರ್ಕಳ: “ಡ್ರ್ಯಾಗರ್” ಇಟ್ಟುಕೊಂಡು ಕಾರಿನಲ್ಲಿ ದರೋಡೆಗೆ ಸಂಚು ಆರೋಪ – ಐವರ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: “ಡ್ರ್ಯಾಗರ್” ಇಟ್ಟುಕೊಂಡು ಕಾರಿನಲ್ಲಿ ದರೋಡೆಗೆ ಸಂಚು ಆರೋಪದಡಿಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.

ಆರೋಪಿಗಳಾದ ಇಸಾಕ್‌, ಕಬೀರ್‌, ಇಬ್ರಾಹಿಂ, ಮಹಮ್ಮದ್‌ ಶಿಯಾಬ್‌, ಬಂಗ್ಲೆಗುಡ್ಡೆ ಫೈಜಲ್‌ ಇವರು ಮೇ 24 ರಂದು 6.30 ರ ಸಮಯದಲ್ಲಿ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಕಂಪನ ಎಂಬಲ್ಲಿ ಕಾರಿನಲ್ಲಿ ಕುಳಿತು ಡ್ರ್ಯಾಗರನ್ನು ಇಟ್ಟುಕೊಂಡು ದರೋಡೆ ಮಾಡುವ ಉದ್ದೇಶದಿಂದ ಸಂಚನ್ನು ರೂಪಿಸುತ್ತಿದ್ದು ಕಾರನು ಬಿಟ್ಟು ಓಡಿ ಹೋಗಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2024 ಕಲಂ: 27 ಆರ್ಮ್ಸ್‌ ಕಾಯ್ದೆ 1958 ಮತ್ತು ಕಲಂ: 399, 402 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories