ಕಾರ್ಕಳ: ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದಸ್ಯರು ನೀರಿನಲ್ಲಿ ಮುಳುಗಿ ಮೃತ್ಯು

ಕಾರ್ಕಳ: ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಇಬ್ಬರು ಸದ್ಯಸರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಮೃತರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಮುದೆಲ್ಕಡಿ ಸಮೀಪದ ಉಬ್ರೇಲು ಗುಂಡಿ ಕೆರೆಗೆ ಯಲ್ಲಿ ಮೀನು ಹಿಡಿಯಲು ರವಿವಾರ ಸಂಜೆ 3.30 ಹೋಗಿದ್ದರು.

ಮೃತರನ್ನು ಹರೀಶ್ ಪೂಜಾರಿ (48) ರಿತೇಶ್ (18) ಎಂದು ಗುರುತಿಸಲಾಗಿದೆ.

ಶಿರ್ಲಾಲು ಗ್ರಾಮದ ಹರೀಶ್ ಪೂಜಾರಿ (48 ) ಜೊತೆ ಹಾಗೂ ಅವರ ಸಹೋದರಿ ಪುತ್ರ ಕೆರುವಾಶೆ ಗ್ರಾಮದ ರಿತೇಶ್ (18) ರಜೆಯ ಹಿನ್ನೆಲೆಯಲ್ಲಿ ಮಾವನೊಂದಿಗೆ ಮೀನು ಹಿಡಿಯಲು ಹೋದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.ಮೀನು ಹಿಡಿಯುತ್ತಿದ ವೇಳೆ ಕೆಸರಲ್ಲಿ ಹೂತು ಹೋದ ರಿತೇಶ್ ಮುಳುಗುವುದು ಕಂಡು ಅತನನ್ನು ರಕ್ಷಿಸಲು ಹೋದಹರೀಶ್ ಪೂಜಾರಿ ಅವರೂ ನೀರಿನಲ್ಲಿ ಮುಳುಗಿ ಇಬ್ಬರೂ ಸಾವನ್ನಪ್ಪಿದ್ದಾರೆ.

ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories