ಶಿವಪುರ ಜೆಸಿಬಿ- ಬೈಕ್ ಡಿಕ್ಕಿ : ಉದಯವಾಣಿ ಪತ್ರಿಕೆ ವಿತರಕ ಸಾವು

ಹೆಬ್ರಿ, ಜು. 5: ಶಿವಪುರ ಸಮೀಪ ನಾಯರ್ ಕೋಡು ಬಳಿ ಜೆಸಿಬಿ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಉದಯವಾಣಿ ಪತ್ರಿಕೆಯ ವಿತರಕ ಪ್ರತ್ಯಕ್ಷ ಶೆಟ್ಟಿ (21 ) ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.

ನಾಯರ್ ಕೋಡು ನಿವಾಸಿ ಮೃತ ಪಟ್ಟ ಯುವಕ. ತಮ್ಮನನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ಸಂದರ್ಭ ಘಟನೆ ನಡೆದಿದ್ದು ಹಿಂಬದಿ ಸವಾರ ಸಹೋದರ ಪ್ರೀತಿಶ್ ಗೆ
ಸಣ್ಣ ಪುಟ್ಟ ಗಾಯವಾಗಿದೆ.

ಮುನ್ನ ಎಂದೆ ಗೆಳೆಯರಿಂದ ಕರೆಯಲ್ಪಡುತ್ತಿದ್ದ ಪ್ರತ್ಯಕ್ಷ ಶಿವಪುರ ಪೆಟ್ರೋಲ್ ಬಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ತಂದೆಯನ್ನು ಕಳೆದುಕೊಂಡಿದ್ದ ಪ್ರತ್ಯಕ್ಷ ಮನೆಯ ಆದರ ಸ್ತಂಭವಾಗಿದ್ದು ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು.

Latest Indian news

Popular Stories