ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿದಿರಿ; ಇಂದು ಬಿಜೆಪಿ ನಿಮ್ಮನ್ನು ಹೊರದಬ್ಬಿದೆ – ಅಲಿಯಾ ಅಸ್ಸಾದಿ ರಘುಪತಿ ಭಟ್’ಗೆ ಟಾಂಗ್

ಉಡುಪಿ:ಉಚ್ಛಾಟಿತ ಬಿಜೆಪಿ ಮಾಜಿ ಶಾಸಕ ರಘುಪತಿ ಭಟ್ ಗೆ ಹಿಜಾಬ್ ವಿವಾದದ ಎಂಟು ವಿದ್ಯಾರ್ಥಿಗಳಲ್ಲಿ ಒರ್ವಳಾದ ಆಲಿಯಾ ಅಸ್ಸಾದಿ ಎಕ್ಸ್’ನಲ್ಲಿ ಟಾಂಗ್ ನೀಡಿದ್ದಾಳೆ‌

ದೇವನು ತಾನಿಚ್ಚಿಸಿದ್ದನ್ನು ಮಾಡಿಯೇ ತೀರುವನು. ವಾರ್ಷಿಕ ಪರೀಕ್ಷೆಗೆ ಇನ್ನೇನು 60 ದಿನ ಇತ್ತು. ಹಿಜಾಬ್ ಧರಿಸಿದ ಏಕಮಾತ್ರ ಕಾರಣಕ್ಕೆ ನನ್ನನ್ನು ಕಾಲೇಜಿನಿಂದ ಹೊರದಬ್ಬಿದಿರಿ. ನಿಮ್ಮ ಪಕ್ಷಕ್ಕೆ ದೊಡ್ಡ ಸಾಧನೆ ಮಾಡಿ ತೋರಿಸಿದರಲ್ಲವೇ. ಇಂದು ಅದೇ ಪಕ್ಷ ನಿಮ್ಮನ್ನು ಹೊರದಬ್ಬಿದೆ ಎಂದು ಹೇಳಿದ್ದಾರೆ.

ಆ ಕ್ಷಣವನ್ನು ನಾನು ನನ್ನ ಉಡುಪಿಯಲ್ಲೇ ನೋಡುವಂತಾಯಿತು. ಇಂದು ನಾನು ವಕೀಲೆ ಪದವಿ ವಿದ್ಯಾರ್ಥಿ.ನೀವು ಉಚ್ಚಾಟಿತ ವ್ಯಕ್ತಿ, ಅಭ್ಯರ್ಥಿ ಎಂದು ಟಾಂಗ್ ನೀಡಿದ್ದಾರೆ‌.

Latest Indian news

Popular Stories