ಕುಂದಾಪುರ: 2.65 ಕೋಟಿ “ವಿನ್ನರ್” ಎಂದು ಹೇಳಿ 14 ಲಕ್ಷ ಪಂಗನಾಮ!

ಶಂಕರನಾರಾಯಣ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಲಕ್ಷಾಂತರ ರೂಪಾಯಿ ಆನ್ಲೈನ್ ವಂಚನಾ ಪ್ರಕರಣದ ಕುರಿತು ದೂರು ದಾಖಲಾಗಿದೆ.

ಸುಮಾರು 6 ತಿಂಗಳ ಹಿಂದೆ  ರವಿ ಎಂಬುವವರ G.mail ಖಾತೆಗೆ Royal Bank of Schotland India ದಿಂದ Ford Motor Company House Hold Reliefe Fund ನಿಂದ 2.65 ಕೋಟಿ ರೂ Winner ಎಂಬುದಾಗಿ ಮೇಸೆಜ್ ಬಂದಿದೆ.


ಅದನ್ನು ನಂಬಿ ತಮ್ಮ ವೈಯುಕ್ತಿಕ ಮಾಹಿತಿಯನ್ನು ತಮ್ಮ ಮೊಬೈಲ್ ಗೆ ಬಂದಿದ್ದ E-Mail ID ಗೆ ಕಳುಹಿಸಿದ್ದಾರೆ. ನಂತರ ದಿನಾಂಕ 31/08/2023 ರಂದು  ಕರೆಮಾಡಿ ತಾನು ಪೂಜಾ ಶರ್ಮ ಎಂದು ತನ್ನ ಪರಿಚಯ ಹೇಳಿ  Ford Motor Company House Hold Reliefe Fund Winner ಎಂದು ಸರಕಾರಕ್ಕೆ 2% ಹಾಗೂ ಬ್ಯಾಂಕ್ ಗೆ 1% ತೆರಿಗೆ ಪಾವತಿಸಿ ಪ್ರೋಸೆಸ್ ಶುರು ಮಾಡಬೇಕಾಗುತ್ತದೆ ಎಂದು ಯಮಾರಿಸಿದ್ದಾರೆ.

ಬಳಿಕ CRF Permit ಗೆ, Tax Department ಗೆ, ಹಣ ಪಾವತಿಸುವ ಬಗ್ಗೆ ಹೀಗೆ ಹಲವು ಕಾರಣಗಳನ್ನು ಹೇಳಿ ದಿನಾಂಕ 04/08/2023 ರಿಂದ ದಿನಾಂಕ 20/01/2024 ರ ವರೆಗೆ ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ 14,23,000/- ಹಣವನ್ನು ಪಾವತಿಸಿ ವಂಚನೆಗೊಳಗಾಗಿದ್ದಾರೆ.

ಆರೋಪಿಗಳು Ford Motor Company House Hold Reliefe Fund Winner ಹಣ 2.65 ಕೋಟಿ ರೂ ನೀಡುವುದಾಗಿ ನಂಬಿಸಿ ಪಿರ್ಯಾದಿದಾರರಿಂದ ಒಟ್ಟು ರೂ 14,23,000/- ಹಣವನ್ನು ಪಡೆದು ಬಳಿಕ ಅವರು Winner ಆಗಿರುವುದಾಗಿ ತಿಳಿಸಿದ ಹಣವನ್ನು ನೀಡದೇ,  ಕಳುಹಿಸಿದ ಹಣವನ್ನು ವಾಪಾಸು ನೀಡದೇ  ಮೋಸ ಮಾಡಿದ್ದಾರೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 27/2024 ಕಲಂ: 66© 66 (D) IT Act ಮತ್ತು 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories