ಕುಂದಾಪುರ: ರಾಮನಗರದ ಕರ್ನಾಟಕ ಬ್ಯಾಂಕ್ ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದ ಯುವಕ ಇದಕ್ಕಿದ್ದ ಹಾಗೆ ನಾಪತ್ತೆಯಾಗಿದ್ದ. ಇದೀಗ ಅವರ ಮೃತದೇಹ ಅರಬಿ ಸಮುದ್ರದಲ್ಲಿ ಪತ್ತೆಯಾಗಿದೆ.
ಮೃತರನ್ನು ಪ್ರಸಾದ್ (24) ಎಂದು ಗುರುತಿಸಲಾಗಿದೆ.
ಫೆ.16 ತಾರೀಕಿನಂದು ಮೊಬೈಲ್ ಸ್ವಿಚ್ ಆಫ್ ಆಗಿದ್ದ ಕಾರಣ ಬ್ಯಾಂಕ್ ಮ್ಯಾನೇಜರ್ ಕರೆ ಮಾಡಿ ಮನೆಯವರು ವಿಚಾರಿಸಿದ್ದಾರೆ. ಪ್ರಸಾದನು ಬೆಳಗ್ಗೆ 11:00 ಗಂಟೆವರಗೆ ಕರ್ತವ್ಯದಲ್ಲಿದ್ದು ನಂತರ ಬೇರೆ ಬ್ರಾಂಚ್ ಗೆ ವಿಸಿಟ್ ಮಾಡಿರುವುದಾಗಿ ಹೇಳಿ ಹೋಗಿರುವುದಾಗಿ ತಿಳಿಸಿದ್ದಾರೆ
ನಂತರ ಮತ್ತೆ ಅವರ ಮೊಬೈಲ್ ಗೆ ಕರೆ ಮಾಡಿದಲ್ಲಿ ಸ್ವಿಚ್ ಆಪ್ ಆಗಿತ್ತು. ಫೆ.17 ರ ಶನಿವಾರದಂದು ಬೆಳಗ್ಗಿನ ಜಾವ ಸ್ಥಳಿಯರು ಕರೆಮಾಡಿ ಪ್ರಸಾದನ ಮೃತ ದೇಹವು ಕುಂದಾಪುರ ತಾಲೂಕು ಕಸಬಾ ಗ್ರಾಮದ ಚಕ್ರೇಶ್ವರಿ ದೇವಸ್ಥಾನದ ಎದುರುಗಡೆ ಇರುವ ಅರಬ್ಬಿ ಸಮುದ್ರದ ದಡದಲ್ಲಿ ಇರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 04/2024 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.