ಬೈಂದೂರು | ದನಗಳ್ಳತನ ಆರೋಪ ; ಇಬ್ಬರ ಬಂಧನ

ಬೈಂದೂರು ಪೊಲೀಸ್ ಠಾಣಾ ಸರಹದ್ದಿನ ಶಿರೂರು ಗ್ರಾಮದ ಶೀರೂರು ಪೇಟೆಯ ಮಂಜುನಾಥ ಹೊಟೇಲ್ ಎದುರುಗಡೆ ಖಾಲಿ ಜಾಗದಲ್ಲಿ ಮಲಗಿದ್ದ ಗೋವುಗಳನ್ನು ಕದ್ದು ಒಯ್ದಿರುತ್ತಾರೆ ಎಂಬುದಾಗಿ ಫ ಶ್ರೀಧರ್ ಬಿಜೂರು ನೀಡಿದ ದೂರಿನ ಮೇರೆಗೆ ಬೈಂದೂರು ರವರು ದಿನಾಂಕ 07/06/2024 ರಂದು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣಾ ಅ ಅಪರಾಧ ಕ್ರಮಾಂಕ 163/2024 ಕಲಂ. 379,506 ಜೊತೆಗೆ 34 ಭಾ.ದಂ.ಸಂ. ನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳ ಲಾಗಿತ್ತು.

ಸದ್ರಿ ಪ್ರಕರಣದಲ್ಲಿ ಸವೀತ್ರ ತೇಜ್ ಪೊಲೀಸ್ ವೃತ್ತ ನಿರೀಕ್ಷಕರು ಬೈಂದೂರು ರವರ ನೇತೃತದ ತಿಮ್ಮೇಶ್ ಬಿಎನ್ ಪಿ.ಎಸ್.ಐ. (ಕಾ.ಸು ) ಮತ್ತು ಹೆಚ್ ಸಿ 1157 ನೇ ಪ್ರಿನ್ಸ್ ಕೆ ಜೆ , ಪಿಸಿ 1172 ಸುಜಿತ್ ಕುಮಾರ್ ಹಾಗೂ ಪಿಸಿ 276 ನೇ ಮಾಳಪ್ಪರವರು ತಂಡವು ದಿನಾಂಕ 22/06/2024 ರಂದು ಆರೋಪಿತರಾದ 1. ಅಬ್ದುಲ್ ಸಮಾದ್ ಪ್ರಾಯ 27 ವರ್ಷ ತಂದೆ: ಖಾಧರ್ ಬಾಷಾ, ಎಮ್ ಕೋಡಿ ಕಸಬಾ ಕುಂದಾಪುರ ತಾಲೂಕು 2. ಅಬ್ದುಲ್ ರೆಹಮಾನ್ ಪ್ರಾಯ:25 ವರ್ಷ ತಂದೆ: ಶಾಹುಲ್ ಹಮೀದ್ ಕೋಡಿ ಕಸಬಾ, ಕುಂದಾಪುರ ತಾಲೂಕು ರವರನ್ನು ಮಧ್ಯಾಹ್ನ 15:00 ಗಂಟೆಗೆ ಹಾಲಾಡಿ ರಸ್ತೆಯ ಕೊಟೇಶ್ವರ ಸನ್ ರೈಸ್ ಫ್ಯಾಕ್ಟರಿ ಬಳಿ ವಶಕ್ಕೆ ಪಡೆದು ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಮಹೇಂದ್ರ XUV 500 ಕಾರು ಮತ್ತು Eco Sport Ford ಕಾರನ್ನು ಹಾಗೂ 1+ Nord2 ಕಂಪೆನಿಯ ಮೊಬೈಲ್ -1, ಅಂದಾಜು ಮೌಲ್ಯ ರೂ 4,000/- ಮತ್ತು OPPO ಕಂಪೆನಿಯ ಮೊಬೈಲ್ -1, ಅಂದಾಜು ಮೌಲ್ಯ ರೂ 5000/- ನೇದನ್ನು ಕೃತ್ಯಕ್ಕೆ ಬಳಸಿದ ಚೂರಿಯನ್ನು ಸ್ವಾಧೀನ ಪಡಿಸಿಕೊಂಡಿರುತ್ತಾರೆ. ವಶಪಡಿಸಿಕೊಂಡು ಕಾರುಗಳ ಅಂದಾಜು ಮೌಲ್ಯ ಒಟ್ಟು 9,00,000/- ರೂಪಾಯಿ ಆಗಿರುತ್ತದೆ.

Latest Indian news

Popular Stories