ಗಂಗೊಳ್ಳಿ: ಮಧ್ಯರಾತ್ರಿ ಅಪರಿಚಿತರಿಂದ ಕಾರಿನಲ್ಲಿ ದನಗಳ್ಳತನಕ್ಕೆ ಯತ್ನ – ಪ್ರಕರಣ ದಾಖಲು

ಕುಂದಾಪುರ: ಮಧ್ಯರಾತ್ರಿ ಅಪರಿಚಿತರು ಕಾರಿನಲ್ಲಿ ಬಂದು ದನಗಳ್ಳತನಕ್ಕೆ ಯತ್ನಿಸಿದ ಆರೋಪದ ಕುರಿತು ಪ್ರಕರಣ ದಾಖಲಾಗಿದೆ.

ದೂರುದಾರ ಕೇದಾರ್‌ (25) ಅವರು ಆಗಸ್ಟ್ 12ರ ತಡರಾತ್ರಿ 02:20 ಗಂಟೆಗೆ ಮನೆಯಿಂದ ಮೂತ್ರ ವಿರ್ಸಜನೆ ಮಾಡಲು ಮನೆಯ ಹೊರಗಡೆ ಬಂದಾಗ ಮನೆಯ ಎದುರು ಇರುವ ಮೈದಾನದಲ್ಲಿ ದನಗಳು ಕೂಗಿ ಕೊಳ್ಳುವುದನ್ನು ಕೇಳಿ ಮೈದಾನದ ಕಡೆಗೆ ಹೋದಾಗ ರಸ್ತೆಯಲ್ಲಿ ಬಂದು ಕಾರು ನಿಂತಿದ್ದು ಒಬ್ಬ ವ್ಯಕ್ತಿಯು ಕಾರಿಗೆ ದನವನ್ನು ತುಂಬುತ್ತಿರುವುದನ್ನು ನೋಡಿ ಬೊಬ್ಬೆ ಹಾಕಿದಾಗ ಆ ವ್ಯಕ್ತಿಯು ದನವನ್ನು ಅಲ್ಲಿಯೇ ಬಿಟ್ಟು ಕಾರನ್ನು ಹತ್ತಿಕೊಂಡು ಪಡುಕೋಣೆ ಕಡೆಗೆ ಹೋಗಿದ್ದಾನೆಂದು ಆರೋಪಿಸಿದ್ದಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2024 ಕಲಂ: 303(2), 62 BNS ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories