ಗಂಗೊಳ್ಳಿ: ಗಾಂಜಾ ಸೇವನೆ ಪ್ರಕರಣ – ನಾಲ್ಕು ಮಂದಿ ವಶಕ್ಕೆ

ಗಂಗೊಳ್ಳಿ: ಆಗಸ್ಟ್ 12 ರಂದು ಬಸವರಾಜ್‌ ಕನಶೆಟ್ಟಿ, ಪೊಲೀಸ್‌ ಉಪನಿರೀಕ್ಷಕರು(ತನಿಖೆ), ಗಂಗೊಳ್ಳಿ ಠಾಣೆ ಇವರು ರೌಂಡ್ಸ್‌ ಕರ್ತವ್ಯದಲ್ಲಿರುವಾಗ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ ಪಾರ್ಕ್‌ ಬಳಿ 4 ಜನ ವ್ಯಕ್ತಿಗಳು ಅನುಮಾನಾಸ್ಪದವಾಗಿ ಗಾಂಜಾವನ್ನು ಸೇವಿಸುತ್ತಿದ್ದಾರೆ ಎಂಬ ಬಗ್ಗೆ ದೊರೆತ ಮಾಹಿತಿ ಬಂದಿದೆ.

ಅದರಂತೆ ಅಲ್ಲಿಗೆ ಹೋಗಿ ನೋಡಿದಾಗ 4 ಜನ ವ್ಯಕ್ತಿಗಳು ಅಮಲಿನಲ್ಲಿ ತೂರಾಡುತ್ತಿರುವುದು ಕಂಡು ಬಂದಿದೆ. ಆರೋಪಿಗಳು 1) ಮೆಹತಾಬ್‌ ಶರೀಪ್‌ (30), 2) ಅರ್ಷಾದ್‌ ನೌಶಾದ್‌ (21), 3) ಮೊಹಮ್ಮದ್‌ ಇಮ್ರಾನ್‌ (30), , 4) ರೋಹಿತ್‌ (32) ಎಂಬುದಾಗಿ ಅವರ ಹೆಸರು ತಿಳಿಸಿದ್ದಾರೆ.

ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆ ವೈಧ್ಯಾದಿಕಾರಿಯವರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿರುವುದಾಗಿ ವರದಿ ನೀಡಿರುತ್ತಾರೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2024 ಕಲಂ: 27(B) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories