ಕುಂದಾಪುರ | ಗಾಂಜಾ ವ್ಯವಹಾರ ಆರೋಪ: ದಂಪತಿ ಬಂಧನ

ಕುಂದಾಪುರ: ಮನೆಯಲ್ಲಿ ಗಾಂಜಾವನ್ನು ಅಕ್ರಮವಾಗಿ ದಾಸ್ತಾನು ಇರಿಸಿ ಮಾರಾಟ ಮಾಡುತ್ತಿದ್ದ ಆರೋಪಿ ದಂಪತಿಯನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವ ಘಟನೆ ಗುಲ್ವಾಡಿ ಗ್ರಾಮದ ಉದಯ ನಗರ ಎಂಬಲ್ಲಿ ಇಂದು ನಡೆದಿದೆ.

ಉದಯ ನಗರ ನಿವಾಸಿ ನಜರುಲ್ಲಾ ಖಾನ್‌(40), ಆತನ ಪತ್ನಿ ಫಾತಿಮಾ(33) ಬಂಧಿತ ಆರೋಪಿಗಳು. ಇವರಿಂದ ಒಟ್ಟು 6,43,000ರೂ. ಮೌಲ್ಯದ 8 ಕೆ.ಜಿ 374 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ಇವರು ಮನೆಯಲ್ಲಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಇಟ್ಟುಕೊಂಡಿದ್ದಲ್ಲದೇ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಉಪನಿರೀಕ್ಷಕ ಭೀಮಾಶಂಕರ ಸಿನ್ನೂರ ಸಂಗಣ್ಣ ನೇತೃತ್ವದಲ್ಲಿ , ಎಸ್ಸೈ ನೂತನ್ ಡಿ. ಹಾಗೂ ಸಿಬ್ಬಂದಿ ಸೂರ ನಾಯ್ಕ್, ರಾಜು.ಬಿ, ವಿಕ್ರಮ್, ಮಂಜುನಾಥ, ರಮೇಶ್, ಕಿಶನ್ ಗೌಡ, ಶೋಭಾ ಹಾಗೂ ನಯನ, ರಾಮ ರವರ ತಂಡ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Latest Indian news

Popular Stories