ಕುಂದಾಪುರ: ಸ್ಕೂಟರ್ ಸವಾರ ಟಿಪ್ಪರ್ ಅಡಿ ಬಿದ್ದು ಮೃತ್ಯು

ಕುಂದಾಪುರ: ಸ್ಕೂಟರ್ ಸವಾರರೊಬ್ಬರು ಕಾರಿಗೆ ಗುದ್ದಿ ನಂತರ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಅಡಿಗೆ ಬಿದ್ದು ಮೃತಪಟ್ಟಿದ್ದಾರೆ.

ಮೇ 14 ರ ಸಂಜೆ ಕುಂದಾಪುರ ತಾಲೂಕು ಬಳ್ಕೂರು ಗ್ರಾಮದ ನರಸಿಂಹ ರವರ ಮನೆಯ ಎದುರು ಕಾಂಕ್ರೀಟ್‌ ರಸ್ತೆಯಲ್ಲಿ ಪಿರ್ಯಾದಿದಾರರ ತಂದೆ ಬಸವ (55) ರವರು ಅವರ KA-20-EJ-9575 ನೇ ಟಿವಿಎಸ್‌ ಎಕ್ಸೆಎಲ್‌ ನಲ್ಲಿ ಸವಾರಿ ಮಾಡಿಕೊಂಡು ಬಸ್ರೂರು ಕಡೆಯಿಂದ ಬಳ್ಕೂರು ಕಡೆಗೆ ಎದುರಿನ ಕಾರನ್ನು ಹಿಂದಿಕ್ಕುವ ಭರದಲ್ಲಿ ಕಾರಿನ ಬಲ ಬದಿಯ ಹಿಂಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮೇಲೆ ಬಿದ್ದಾಗ ಎದುರಿನಿಂದ ಬರುತ್ತಿದ್ದ ಟಿಪ್ಪರ್‌ ಅಡಿ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಅಪಘಾತದಿಂದ ತೀವ್ರ ಗಾಯಗೊಂಡ ಬಸವ ರವರನ್ನು ಅಲ್ಲಿ ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ . ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories