ಕುಂದಾಪುರ: ಕುಣಿಯೋಣು ಬಾ ಸಮಾರೋಪ


ಮಕ್ಕಳ ಬೇಸಿಗೆ ಶಿಬಿರಗಳನ್ನು ಆಯೋಜಿಸುವುದು ಆರ್ಥಿಕ ಲಾಭ, ದುಂದುವೆಚ್ಚ ಮಾಡುವುದರ ಬದಲು ಕಡಿಮೆ ವೆಚ್ಚದಲ್ಲಿ ಮಕ್ಕಳಿಗೆ ನಮ್ಮ ಗ್ರಾಮೀಣ ಕಸುಬುಗಳನ್ನು ಪರಿಚಯಿಸುತ್ತಾ ಅವರ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ ಅವರ ಸಾಮಾನ್ಯ ಜ್ಞಾನ ಹೆಚ್ಚಿಸಿಕೊಳ್ಳಲು ಮಾಡಿದಾಗ ಯೂಟ್ಯೂಬ್ ವಾಟ್ಸ್ ಆ್ಯಪ್ ಗಳ ಲೋಕದಿಂದ ಹೊರಬರಲು ಸಾಧ್ಯ ಅಂತಹ ಕೆಲಸಗಳನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚು ಮಕ್ಕಳನ್ನು ಒಂದೇ ವೇದಿಕೆಯಡಿ ಯಲ್ಲಿ ತಂದು ಅವರನ್ನು ಸಮಾಜಕ್ಕೆ ನೀಡುತ್ತಿರುವ ಅಕ್ಷರ ಸಂಸ್ಥೆಯ ಸಾಧನೆ ಮೆಚ್ಚುವಂಥದ್ದು ಎಂದು ಸಹಕಾರಿ ಧುರೀಣ,ಉದ್ಯಮಿ ಮಹೇಶ್ ಹೆಗ್ಡೆ ಅವರು ಹೇಳಿದರು.


ಅವರು ಈಸ್ಟ್ ವೆಸ್ಟ್ ಸ್ಪೋರ್ಟ್ಸ್ ಕ್ಲಬ್ ಆವರಣದಲ್ಲಿ ಕಳೆದ ಎಂಟು ದಿನಗಳಿಂದ ನಡೆದ ಮಕ್ಕಳ ಬೇಸಿಗೆ ಶಿಬಿರ ಕುಣಿಯೋಣು ಬಾ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಮೂಡುತ್ತಿರುವ ಅಜ್ಞಾನಗಳನ್ನು ಹೋಗಲಾಡಿಸಿ ಸುಜ್ಞಾನಿಗಳಾಗಿ ಸಮಾಜದಲ್ಲಿ ಒಳ್ಳೆಯ ಮನುಷ್ಯ ನೀಡುವಂತಾಗಬೇಕು ಅಕ್ಷರ ಸಾಂಸ್ಕೃತಿಕ ಸಂಸ್ಥೆ ಈ ನಿಟ್ಟಿನಲ್ಲಿ ತಮ್ಮ ಪ್ರಯತ್ನ ಮುಂದುವರಿಸುತ್ತಾ ಬೆಳೆಯಲಿ ಕೆ ಆರ್ ನಾಯ್ಕ್ ಶುಭ ಹಾರೈಸಿದರು.


ಬೇಸಿಗೆ ಶಿಬಿರದ ನಿರ್ದೇಶಕರಾದ ರಂಗ ನಿರ್ದೇಶಕ, ಸಮುದಾಯ ಸಾಂಸ್ಕೃತಿಕ ಸಂಘಟನೆಯ ಕಾರ್ಯದರ್ಶಿ ವಾಸುದೇವ ಗಂಗೇರ ಅವರು ಶಿಬಿರದ ಬಗ್ಗೆ ಮಾತನಾಡಿದರು.
ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷರಾದ ಡಾ.ಸದಾನಂದ ಬೈಂದೂರು, ಶಿಬಿರದ ಸಹ ನಿರ್ದೇಶಕರಾದ ಚಿನ್ನ ವಿ ಗಂಗೇರ ಮಾತನಾಡಿದರು.


ವೇದಿಕೆಯಲ್ಲಿ ಶೇಖರ ದೋಣಿ ಮನೆ, ಸಂತೋಷ ಡಿ ಉಪಸ್ಥಿತರಿದ್ದರು.


ಅಕ್ಷರ ಸಂಸ್ಥೆಯ ಕಾರ್ಯದರ್ಶಿ ರವಿ ವಿ ಎಂ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.


ಸಮಾರೋಪದ ಅಧ್ಯಕ್ಷತೆಯನ್ನು ಅಕ್ಷರ ಸಂಸ್ಥೆಯ ಸುರೇಶ್ ಕಲ್ಲಾಗರ ವಹಿಸಿದ್ದರು.ಸುಪ್ರೀತ ಅತಿಥಿಗಳನ್ನು ಗೌರವಿಸಿದರು.ಸ್ರಷ್ಠಿ ಚಂದನ್ ಕಾರ್ಯಕ್ರಮ ನಿರೂಪಿಸಿದರು.
ರಾಘವೇಂದ್ರ ಡಿ ವಂದಿಸಿದರು.ಸಮಾರೋಪದಲ್ಲಿ ಕಿರು ಗೆಜ್ಜೆ ಘಲ್ ಘಲ್ ಎಂಟು ದಿನಗಳಲ್ಲಿ ಮಕ್ಕಳು ವಿವಿಧ ರೀತಿಯ ಕಲೆಗಳನ್ನು ಕಲಿಯುವ ಪ್ರಯತ್ನ ಮಾಡಿದರು.


ಇದೇ ಅವಧಿಯಲ್ಲಿ ಲಿಯೋ ಟಾಲ್ ಸ್ಟಾಯ್ ಅವರ ಸಂಕಲನವನ್ನು ಶಂಕ್ರಯ್ಯ ಘಂಟಿ ಮಕ್ಕಳ ನಾಟಕಕ್ಕೆ ರೂಪಾಂತರಿಸಿದ ಕಿರು ಗೆಜ್ಜೆ ಘಲ್ ಘಲ್ ಎಂಬ ಮಕ್ಕಳ ನಾಟಕ 60 ಮಕ್ಕಳಿಗೆ ತರಬೇತಿ ನೀಡಿ ವಾಸುದೇವ ಗಂಗೇರ ನಿರ್ದೇಶನದಲ್ಲಿ ಪ್ರದರ್ಶನ ನಡೆಸಲಾಯಿತು.

Latest Indian news

Popular Stories