ಕುಂದಾಪುರ: ತಾಲೂಕಿನಾದ್ಯಂತ ಸೈನ್ ಇನ್ ಸೆಕ್ಯೂರಿಟಿಗೆ ಕಳ್ಳರು ಬೆಚ್ಚಿದ್ದು ಕಳ್ಳತನ ನಡೆಸುವಾಗಲೇ ಲಾಕ್ ಆಗುತ್ತಿದ್ದಾರೆ.
ಕಳೆದ ಒಂದೇ ವಾರದಲ್ಲಿ ಕುಂದಾಪುರ ವ್ಯಾಪ್ತಿಯಲ್ಲಿ ಎರಡು ಕಳ್ಳತನ ಪ್ರಕರಣಗಳು ವಿಫಲವಾಗಿದೆ.. ಅಷ್ಟೇ ಅಲ್ಲ, ಸೊಸೈಟಿಯೊಂದರ ಕಳ್ಳತನಕ್ಕೆ ಬಂದಿದ್ದ ಕಳ್ಳನೊಬ್ಬ ಇನ್ನೇನು ಕಳ್ಳತನಕ್ಕೆ ಹೊಂಚು ಹಾಕುತ್ತಲೇ ಪೊಲೀಸರ ಅತಿಥಿಯಾಗಿದ್ದಾನೆ. ಕಳ್ಳ ಒಳಗಡೆ ಇದ್ದಂತೆಯೇ ಪೊಲೀಸರು ಸೈನ್ ಇನ್ ಸೆಕ್ಯೂರಿಟಿ ನಿರ್ದೇಶನದಂತೆ ಆಗಮಿಸಿ ಅಲ್ಲಿಂದಲೇ ಆತನನ್ನು ಅರೆಸ್ಟ್ ಮಾಡಿ ಕರೆದೊಯ್ದಿದ್ದಾರೆ.
ಕಳೆದ ವಾರ ಕಮಲಶಿಲೆ ದೇವಸ್ಥಾನದ ಗೋಶಾಲೆಯ ಗೋಕಳ್ಳತನಕ್ಕೆ ಆಗಮಿಸಿದ್ದ ಇಬ್ಬರು ಕೃತ್ಯ ನಡೆಸುವುದಕ್ಕೂ ಮುನ್ನವೇ ಸೈನ್ ಇನ್ ಸೆಕ್ಯೂರಿಟಿಯ ಸಕಾಲಿಕ ಮಧ್ಯಪ್ರವೇಶದಿಂದ ಕಳ್ಳತನ ವಿಫಲವಾಗಿತ್ತು. ಅಷ್ಟೇ ಅಲ್ಲ, ಬಳಿಕ ಆ ಇಬ್ಬರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ. ಇಲ್ಲೂ ಪೊಲೀಸರನ್ನು ಅಲರ್ಟ್ ಮಾಡಿದ್ದು ಸೈನ್ ಇನ್ ಸೆಕ್ಯೂರಿಟಿ ಎಂಬುದು ವಾಸ್ತವಿಕತೆ.
ಸೈನ್ ಇನ್ ಕುಂದಾಪುರದ ಅಂಗಾರಕಟ್ಟೆಯಲ್ಲಿರುವ ಖಾಸಗಿ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ದಿನದ 24 ಗಂಟೆಯೂ ತಮ್ಮ ಸಂಸ್ಥೆ ವತಿಯಿಂದ ಎಲ್ಲೆಲ್ಲ ಲೈವ್ ಮಾನಿಟರಿಂಗ್ ಸಿಸಿಟಿವಿ ಹಾಕಲಾಗಿದೆಯೋ ಅಲ್ಲೆಲ್ಲ ನಿಗಾ ಇಟ್ಟಿರುತ್ತದೆ.
ಈ ಸಂಸ್ಥೆಯ ಈ ವ್ಯವಸ್ಥೆಯನ್ನು ಈಗಾಗಲೇ ಕುಂದಾಪುರ ಭಾಗದ ಬಹುತೇಕ ಜ್ಯುವೆಲ್ಲರಿ, ಬ್ಯಾಂಕ್, ದೇವಸ್ಥಾನ, ಹಣಕಾಸು ಸಂಸ್ಥೆ, ಸಹಕಾರಿ ಸಂಸ್ಥೆಗಳು, ವಾಣಿಜ್ಯ ಹಾಗೂ ವ್ಯಾಪಾರ ಮಳಿಗೆಗಳು ಈ ಸೈನ್ ಇನ್ ಸೆಕ್ಯೂರಿಟಿ ಸಿಸ್ಟಂ ಅನ್ನು ಅಳವಡಿಸಿಕೊಂಡಿದೆ. ಇದರ ಸಿಬ್ಬಂದಿಗಳು ತಾವು ಸೇವೆ ನೀಡುವ ಸಂಸ್ಥೆ, ಕಟ್ಟಡಗಳ ಮೇಲೆ ನಿಗಾ ಇಟ್ಟು ಅನುಮಾಸ್ಪದ ಚಟುವಟಿಕೆಗಳ ಅನುಮಾನ ಬಂದರೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಈ ವ್ಯವಸ್ಥೆ ಇದೀಗ ಕಳ್ಳರಿಗೆ ತಲೆನೋವು ತರಿಸಿದ್ದು ಇದಕ್ಕೆ ಕುಂದಾಪುರ ತಾಲೂಕಿನಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ.