ಮಲ್ಪೆ: ವಾಟ್ಸಪ್ ಮೂಲಕ ಚಾಟ್: ಡಾಕ್ಟರ್ ಎಂದು ಪರಿಚಯ – 4.96 ಲಕ್ಷ ಆನ್ಲೈನ್ ಪಂಗನಾಮ

ಮಲ್ಪೆ: ಮೋಸ ಹೋಗುವವರಿದ್ದರೆ ಮೋಸ ಮಾಡುವರಿಗೇನು ಚಿಂತೆ ಅಲ್ವಾ? ಹೌದು ಮಲ್ಪೆ ಮೂಲದ ಉದ್ಯಮಿಗೆ ವಾಟ್ಸಪ್ ನಲ್ಲಿ ಚಾಟ್ ಮಾಡಿ ಡಾಕ್ಟರ್ ಎಂದು ನಂಬಿಸಿದ್ಧ ವ್ಯಕ್ತಿಯಿಂದ ಬರೊಬ್ಬರಿ 4.96 ಲಕ್ಷ ಪಂಗನಾಮ ಬಿದ್ದಿದೆ.

2024 ರ ಜನವರಿಯ 24 ರಂದು ಅಪರಿಚಿತ ವ್ಯಕ್ತಿಯೊಬ್ಬ ತಾನು ಡಾಕ್ಟರ್ ಎಂಬುದಾಗಿ ಪರಿಚಯ ಮಾಡಿಕೊಂಡು ಮಲ್ಪೆಯ ಉದ್ಯಮಿಯೊಬ್ಬರಿಗೆ ವಾಟ್ಸ್ಯಾಪ್ ಮೂಲಕ ಚಾಟ್ ಮಾಡಿದ್ದಾನೆ. ನಂತರ ಆತನು ಲಂಡನ್ನಿಂದ ಭಾರತಕ್ಕೆ ಬರುವುದಾಗಿ ಹೇಳಿ ದಿನಾಂಕ 16/02/2024 ರಂದು ಬೆಳಿಗ್ಗೆ 10:30 ಬೇರೆಯೊಂದು ನಂಬರಿನಿಂದ ಕರೆ ಬಂದಿದೆ.

ಸ್ನೇಹಿತ ದಿಲ್ಲಿ ಏರ್ಪೋರ್ಟ್ ಅಥಾರಿಟಿಯಿಂದ ಕರೆ ಮಾಡುತ್ತಿದ್ದು, ನಿಮ್ಮ ಫ್ರೆಂಡ್ ನಮ್ಮ ಕಸ್ಟಡಿಯಲ್ಲಿದ್ದು ಇವರನ್ನು ರೆಸ್ಕ್ಯೂ/ರಿಲೀವ್ ಮಾಡಬೇಕಾದರೆ ಪೆನಾಲ್ಟಿ ಕಟ್ಟಬೇಕಾಗಿ ಹೇಳಿದ್ದು, ಭಾರತ ಸರ್ಕಾರದಿಂದ ತಮ್ಮ ಮೇಲೆ ಲೀಗಲ್ ಪ್ರೊಸೀಜರ್ ಆಗಬಹುದೆಂದು ಹೆದರಿ ಉದ್ಯಮಿಯು ಹಣವನ್ನು ಕಟ್ಟಿದ್ದಾರೆ.

ಉದ್ಯಮಿಯು ದಿನಾಂಕ 16/02/2024 ರಿಂದ 20/02/2024 ರವರೆಗೆ ಒಟ್ಟು 4,96,000/- ರೂಪಾಯಿ ಹಣವನ್ನು ಕೆನರಾ ಬ್ಯಾಂಕ್ ಖಾತೆಯ ಮೂಲಕ ಹಾಗೂ ಪೋನ್ಪೇ ಮೂಲಕ ವರ್ಗಾಯಿಸಿದ್ದಾರೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 27/2024 ಕಲಂ : 66(D) ಐ.ಟಿ. ಕಾಯ್ದೆ ಮತ್ತು ಕಲಂ : 419 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಗೊಳ್ಳಿಯಲ್ಲಿ ಮಹಿಳೆಗೆ ಐದು‌ ಲಕ್ಷ ಪಂಗನಾಮ:

ಗಂಗೊಳ್ಳಿ: ಅಫ್ರೀನ್ (30) ಇವರ ಮೊಬೈಲಿಗೆ ಹೆಚ್‌.ಆರ್‌ ದಿವ್ಯಾ ಬೆಂಗಳೂರು ರವರ ಹೆಸರಿನಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳ ಮೊಬೈಲ್‌ ನಂಬ್ರನಿಂದ ವಾಟ್ಸಾಪ್‌ ಮೆಸೇಜ್‌ ಬಂದಿದೆ. ನಂತರ ಪಾರ್ಟಟೈಮ್‌ ಜಾಬ್‌ ಬಗ್ಗೆ ಮಾಹಿತಿ ನೀಡಿ ನಂತರ ಲಿಂಕಗಳನ್ನು ಕಳುಹಿಸಿ ಟಾಸ್ಕ್‌ಗಳನ್ನು ನೀಡಿ ಟಾಸ್ಕ್‌ಗಳಿಗಾಗಿ ಹಣ ಪಾವತಿಸುವಂತೆ ಹೇಳಿ ಹಂತ ಹಂತವಾಗಿ ದಿನಾಂಕ 03/02/2024 ರಿಂದ 14/02/2024 ರವರೆಗೆ 5,26,731/- ರೂಪಾಯಿಯನ್ನು ಜಮೆ ಮಾಡಿಕೊಂಡು ನಂತರ ಖಾತೆಗೆ 57,201/- ರೂಪಾಯಿಯನ್ನು ವಾಪಾಸ್ಸು ಜಮೆ ಮಾಡಿದ್ದು ಉಳಿದ 4,69,530/- ರೂಪಾಯಿಯನ್ನು ವಾಪಾಸ್ಸು ನೀಡದೇ ಲಕ್ಸುರಿ ಪ್ರೊಡೆಕ್ಟ್‌ ಬರುತ್ತದೆ ಎಂದು ಹೇಳಿ ನಂಬಿಸಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2024 ಕಲಂ: 417, 420 ಐಪಿಸಿ ಮತ್ತು ಕಲಂ: 66(C) 66(D) IT act -2008 ರಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories