ಮಲ್ಪೆ: ಮೀನುಗಾರಿಕೆ ನಡೆಸುವ ವೇಳೆ ಮೀನುಗಾರನೋರ್ವ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತಪಟ್ಟಿರುವ ಘಟನೆ ಸೆ. 29ರಂದು ಸಂಭವಿಸಿದೆ.
ಲೋಕೇಶ್ ಮುಕ್ರಿ (26) ಸಾವನ್ನಪ್ಪಿದ್ದು, ಇವರು ಮೀನುಗಾರಿಕೆ ಬೋಟಿನಲ್ಲಿ ಕಲಾಸಿ ಆಗಿ ಕೆಲಸ ಮಾಡುತ್ತಿದ್ದರು. ಸೆ. 25ರಂದು ರಾತ್ರಿ ಮಲ್ಪೆಯಿಂದ ತೆರಳಿದ್ದು, ಸೆ. 29ರಂದು ಬೆಳಗ್ಗಿನ ಜಾವ ಸುಮಾರು 40 ನಾಟಿಕಲ್ ಮೈಲು ದೂರದಲ್ಲಿ ಅಬ್ಬರದ ಅಲೆಗೆ ಆಯತಪ್ಪಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.