ಮಲ್ಪೆ: ಅಲೆಗಳ ಹೊಡೆತಕ್ಕೆ ಸಿಲುಕಿದ 1.5 ವರ್ಷದ ಮಗುವಿನ ರಕ್ಷಣೆ

ಮಲ್ಪೆ: ಮಲ್ಪೆ ಬೀಚ್‌ನಲ್ಲಿಅಲೆಗಳ ಹೊಡೆತಕ್ಕೆ ಸಿಲುಕಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಒಂದೂವರೆ ವರ್ಷದ ಮಗುವನ್ನು ಮುಳುಗು ತಜ್ಞ ಈಶ್ವರ ಮಲ್ಪೆ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಬೀಚ್‌ಗೆ ಬಂದ ಮೈಸೂರು ಮೂಲದ ದಂಪತಿ ಸ್ನಾನಕ್ಕೆಂದು ಮಗುವಿನೊಂದಿಗೆ ನೀರಿಗಿಳಿದಿದ್ದರು. ಸ್ನಾನ ಮಾಡುತ್ತಿರುವ ವೇಳೆ ಮಗು ಅಲೆಗಳ ಹೊಡೆತಕ್ಕೆ ಸಿಲುಕಿ ನೀರು ಕುಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಇದನ್ನು ಕಂಡ ಮಲ್ಪೆ ಬೀಚ್‌ ಆಟೋರಿಕ್ಷಾ ನಿಲ್ದಾಣದ ಚಾಲಕರು ಈಶ್ವರ ಮಲ್ಪೆ ಅವರ ಆ್ಯಂಬುಲೆನ್ಸ್‌ ವರೆಗೆ ಮಗುವನ್ನು ಅಟೋರಿಕ್ಷಾದಲ್ಲಿ ಕರೆತಂದರು.

ತತ್‌ಕ್ಷಣ ಕಾರ್ಯಪ್ರವೃತ್ತರಾದ ಈಶ್ವರ್‌ ತಂಡ ಮಗುವನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದೆ. ಸದ್ಯ ಮಗು ಚೇತರಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದೆ.

Latest Indian news

Popular Stories