ಮಲ್ಪೆ : ಸೊಸೆ ಮೇಲೆ ಕಳ್ಳತನ ಪ್ರಕರಣ ದಾಖಲಿಸಿದ ಅತ್ತೆ!

ಮಲ್ಪೆ: ಕೆಳಾರ್ಕಳಬೆಟ್ಟು ಗ್ರಾಮದ ಶಶಿಕಲಾ ಇವರು ಮೇ 22 ರಂದು ಮನೆಯ ಕಪಾಟಿನಲ್ಲಿ 50 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಇಟ್ಟಿದ್ದು, ರಾತ್ರಿ 09:00 ಗಂಟೆಗೆ ಮನೆಗೆ ಬಂದು ನೋಡಿದಾಗ ಕಪಾಟಿನಲ್ಲಿ ಇಟ್ಟಿದ್ದ ಮಾಂಗಲ್ಯ ಸರ ಕಾಣೆಯಾಗಿದೆ.

ಎಲ್ಲಾ ಕಡೆ ಹುಡುಕಾಡಿದರೂ ಸಿಕ್ಕಿರುವುದಿಲ್ಲ. ಅದೇ ದಿನ ಸೊಸೆ ಚಂದ್ರಕಲಾ ಮತ್ತು ಮೊಮ್ಮಗ ಪುಲಸ್ತ್ಯ ರವರು ಮನೆ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದು, ಈ ಬಗ್ಗೆ ಅವರಿಬ್ಬರಲ್ಲಿ ವಿಚಾರಿಸಿದಾಗ ಮೊದಲು ಒಪ್ಪಿಕೊಳ್ಳದೆ ಇದ್ದು, ನಂತರ 50 ಗ್ರಾಂ ಚಿನ್ನವನ್ನು ಕೊಡವುದಾಗಿ ತಿಳಿಸಿದ್ದು, ನಂತರ ನೀಡಲು ನಿರಾಕರಿಸಿರುತ್ತಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿಂದೆಯು ಅವರಿಬ್ಬರೂ ಮನೆಗೆ ಬಂದಾಗ ಕೆಲವು ವಸ್ತುಗಳು ಕಾಣೆಯಾಗಿರುತ್ತದೆ. ಆದ್ದರಿಂದ ಸೊಸೆಯಾದ ಚಂದ್ರಕಲಾ ಮತ್ತು ಮೊಮ್ಮಗ ಪುಲಸ್ತ್ಯರವರ ಮೇಲೆ ಅನುಮಾನ ಇರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2024 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

Latest Indian news

Popular Stories