Udupi
ಉಡುಪಿಯಲ್ಲಿ ಮರಳು ಮಾಫಿಯಾಗೆ ವ್ಯಕ್ತಿ ಬಲಿ :ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಹಿಂಬದಿ ಸವಾರ ದುರ್ಮರಣ

ಉಡುಪಿ : ಉಡುಪಿಯಲ್ಲಿ ಮರಳು ಮಾಫಿಯಾಗೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ ಮರಳು ತುಂಬಿದ್ದ ಟಿಪ್ಪರ್ ಒಂದು ವೇಗವಾಗಿ ಚಲಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬಡಗು ಬೆಟ್ಟು ವಿನ ಶಾಂತಿನಗರದಲ್ಲಿ ನಡೆದಿದೆ.
ಹೌದು ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ದುರ್ಮರಣ ಹೊಂದಿದ್ದಾನೆ. ಉಡುಪಿ ಬಡಗುಬೆಟ್ಟು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಉಡುಪಿಯ ಶಾಂತಿನಗರದಲ್ಲಿ ದಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಜನಾರ್ಧನ್ ದುರ್ಮರಣ ಹೊಂದಿದ್ದಾನೆ.
ಇನ್ನು ಬೈಕ್ ಓಡಿಸುತ್ತಿದ್ದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾರಿ ಹರಿದ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರಿಯಾಗಿದೆ ಬೈಕ್ ಸವಾರ ಸಂತೋಷ್ಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದ್ದು, ಟಿಪ್ಪರ್ ಮಾಲಿಕ ಹಾಗೂ ಚಾಲಕನ ವಿರುದ್ಧ FIR ದಾಖಲಾಗಿದೆ.