ಮಣಿಪಾಲ: ಸರಗಳ್ಳರ ಸೆರೆಗೆ ಬೀಸಿದ ಬಲೆಗೆ ಸಿಕ್ಕಿದ ಬೈಕ್ ಕಳ್ಳ

ಕಳೆದ ಆರು ತಿಂಗಳ ಹಿಂದೆ ಮಣಿಪಾಲ
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಬೈಕ್ ಕಳವು ಪ್ರಕರಣಕ್ಕೆ ಸಂಬಂದಿಸಿ ಒರ್ವ ಆರೋಪಿಯನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬ್ರಹ್ಮಾವರ ಪುತ್ತೂರು ನಿವಾಸಿ ಪ್ರಕಾಶ್ ನಾಯಕ್ ಎಂದು ಗುರುತಿಸಲಾಗಿದೆ. ಈತನಿಂದ ಕಳವು ಮಾಡಿರುವ ಬೈಕ್ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಸಲಾಗಿದೆ.

ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ನಡೆದ ಮಹಿಳೆಯ ಚಿನ್ನದ ಸರ ಕಳವು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತಪಾಸಣೆ ನಡೆಸಿದ್ದು, ಈ ವೇಳೆ ಮಣ್ಣಪಳ್ಳ ಎಂಜೆಸಿ ಕಾಲೇಜು ಬಳಿ ಬರುತ್ತಿದ್ದ ವ್ಯಕ್ತಿಯ ನಡುವಳಿಕೆಯ ಮೇಲೆ ಸಂಶಯಗೊಂಡ ಪೊಲೀಸರು ಆತನನ್ನು ತಡೆದು ನಿಲ್ಲಿಸಿದ್ದಾರೆ. ಆತನ ಪೂರ್ವಪರ ಪರೀಕ್ಷಿಸಿದ ಪೊಲೀಸರಿಗೆ ಆತನ ಕೈಯಲ್ಲಿದ್ದ ಬೈಕ್ ಕಳವು ಮಾಡಿರುವುದು ತಿಳಿದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ಬೈಕ್‌ಯನ್ನು ವಶ ಪಡಿಸಿಕೊಂಡಿದ್ದಾರೆ.

ಮಣಿಪಾಲ ಪೊಲೀಸ್ ಠಾಣೆಯ ನಿರೀಕ್ಷಕ ದೇವರಾಜ್ ಟಿ.ವಿ., ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ, ಸಿಬ್ಬಂದಿಗಳಾದ ಇಮ್ರಾನ್, ಪ್ರಸನ್ನ ಕಾರ್ಯಾಚರಣೆಯಲ್ಲಿದ್ದರು.

Latest Indian news

Popular Stories